56 ಆದರೂ 25 ರಂತೆ ಕಾಣುವ ಯಂಗ್ ಮಮ್ಮಿ ಡೆಮಿ ಮೋರ್ ತನ್ನ ಜೀವನದಲ್ಲಾದ ಭಯಂಕರ ಘಟನೆಗಳನ್ನು ಪುಸ್ತಕದ ಮೂಲಕ ಹೇಳಿಕೊಂಡಿದ್ದಾರೆ.

 

ಕುಟುಂಬದವರೊಂದಿಗೆ ಖುಷಿಯಿಂದ ಇರಬೇಕಿದ್ದ ಮೋರ್ ಕುಟುಂಬಸ್ಥರಿಂದಲೇ ಅತ್ಯಾಚಾರಕ್ಕೆ ಒಳಗಾದರು. ಇದರಿಂದ ಮನನೊಂದು ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಹೋಗುತ್ತಾರೆ. ಆಗ ಡೆಮಿಗೆ ಗಿಟಾರಿಸ್ಟ್ ಫ್ರೆಡ್ಡ್ ಪರಿಚಯವಾಗುತ್ತದೆ. ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಮದುವೆಯೂ ಆಗುತ್ತಾರೆ. 5 ವರ್ಷಗಳ ಕಾಲ ಎಲ್ಲವೂ ಚೆನ್ನಾಗಿರುತ್ತದೆ. ಆಮೇಲೆ ಒಂದೊಂದೇ ಭಿನ್ನಾಭಿಪ್ರಾಯಗಳು ಶುರುವಾಗಿ ಅದು ಡಿವೋರ್ಸ್ ನಲ್ಲಿ ಕೊನೆಯಾಗುತ್ತದೆ.

ಶಕುಂತಲಾ ದೇವಿ ಬಯೋಪಿಕ್ ನಲ್ಲಿ ವಿದ್ಯಾ ಬಾಲನ್; ಫಸ್ಟ್ ಲುಕ್ ರಿಲೀಸ್!

 

ಆ ನಂತರ ಬ್ರೂಸ್ ಮಿಲ್ಲೀಸ್ ಪರಿಚಯವಾಗುತ್ತದೆ. ಮದುವೆಯನ್ನೂ ಆಗುತ್ತಾರೆ. ಡೆಮಿ ಮೂರು ಮಕ್ಕಳ ತಾಯಿಯಾಗುತ್ತಾರೆ. ಸಂಸಾರ ಅನ್ಯೋನ್ಯವಾಗಿದೆ ಎನ್ನುವಾಗಲೇ ಅಪಸ್ವರ ಏಳುತ್ತದೆ. 13 ವರ್ಷ ಸಂಸಾರ ಮಾಡಿದ ನಂತರ ಇಬ್ಬರೂ ಕಾರಣಾಂತರಗಳಿಂದ ವಿಚ್ಛೇದನ ಪಡೆದು ವೃತ್ತಿ ಕಡೆ ಗಮನ ಹರಿಸುವುದಕ್ಕೆ ಶುರು ಮಾಡುತ್ತಾರೆ.

ಅಯ್ಯಯ್ಯೋ.. ಇಲಿಯಾನಗೆ ಇದ್ಯಂತೆ ಗಂಭೀರ ಕಾಯಿಲೆ!

ಕೆರಿಯರ್‌ನಲ್ಲಿ ಬ್ರೇಕ್ ಸಿಕ್ಕ ನಂತರ ಡೆಮಿಗೆ ತನಗಿಂತಲೂ 16 ವರ್ಷ ಕಿರಿಯ ವಯಸ್ಸಿನ ಹುಡುಗನ ಮೇಲೆ ಲವ್ ಆಗುತ್ತದೆ. ಗರ್ಭಿಣಿಯೂ ಆಗುತ್ತಾರೆ. ವಿಪರೀತ ಮದ್ಯಪಾನ ಮಾಡುತ್ತಿದ್ದರಿಂದ ಗರ್ಭಪಾತವಾಗುತ್ತದೆ. ಇದರಿಂದ ಮನನೊಂದು ಇಬ್ಬರು ದೂರವಾಗುತ್ತಾರೆ. ತನ್ನ ಜೀವನದಲ್ಲಾದ ಪ್ರತಿಯೊಂದು ಘಟನೆಯನ್ನು ಡೆಮಿ ಮೊರ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.