ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಬೇಕಾ? ನಿಮಗಿದೋ ಅವಕಾಶ

First Published 3, May 2018, 3:16 PM IST
Heroin Wanted to Rakshith Shetty Movie
Highlights

ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್‌ರಾಜ್ ನಿರ್ದೇಶನದ ‘ಚಾರ್ಲಿ 777’ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆದಿದೆ. ನಿರ್ದೇಶಕ, ನಿರ್ಮಾಪಕರು ಜಂಟಿಯಾಗಿ  ಒಂದೊಳ್ಳೆ ನಿರ್ಧಾರಕ್ಕೆ ಬಂದು ಹೊಸ ನಟಿಯರಿಗೂ ಅವಕಾಶ ನೀಡುತ್ತಿದ್ದಾರೆ. 

ಬೆಂಗಳೂರು (ಮೇ. 03): ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್‌ರಾಜ್ ನಿರ್ದೇಶನದ ‘ಚಾರ್ಲಿ 777’ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆದಿದೆ. ನಿರ್ದೇಶಕ, ನಿರ್ಮಾಪಕರು ಜಂಟಿಯಾಗಿ  ಒಂದೊಳ್ಳೆ ನಿರ್ಧಾರಕ್ಕೆ ಬಂದು ಹೊಸ ನಟಿಯರಿಗೂ ಅವಕಾಶ ನೀಡುತ್ತಿದ್ದಾರೆ.

ರಕ್ಷಿತ್ ಶೆಟ್ಟಿಗೆ ನಾಯಕಿಯಾಗುವ ಆಸಕ್ತಿ ಇರುವ ಹುಡುಗಿಯರು  contact@777charlie.com  ಎಂಬ ಇ ಮೇಲ್‌ಗೆ ನಿಮ್ಮ ವಿವರಗಳನ್ನು ಕಳಿಸಬಹುದು. ರಕ್ಷಿತ್ ಶೆಟ್ಟಿಯ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗಡೆ ಇಬ್ಬರೂ ಆಡಿಷನ್ ಮೂಲಕ ಆಯ್ಕೆಯಾಗಿದ್ದವರು. ಅವರಿಬ್ಬರೂ ಈಗಾಗಲೇ ಕನ್ನಡ ಮತ್ತು ತೆಲುಗು  ಚಿತ್ರರಂಗದಲ್ಲೂ ಪ್ರಸಿದ್ಧರಾಗಿದ್ದಾರೆ. ಈ ಅವಕಾಶ ಈಗ ಬೇರೆಯವರ ಪಾಲಿಗೂ ಬಂದಿದೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ. 

loader