ದಕ್ಷಿಣ ಭಾರತದ ದಿ ಮೋಸ್ಟ್ ವಾಂಟೆಡ್ ವಿಲನ್ ಕಬೀರ್ ದುಹಾನ್‌ಗೆ ಹಿನ್ನಲೆ ಗಾಯಕಿ ಡಾಲಿ ಜೊತೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕಬೀರ್ ಸಿಂಗ್ ಸೌತ್ ಇಂಡಿಯನ್ ಗಾಯಕಿ ಡಾಲಿ ಸಿಧು ಜೊತೆ ಎಂಗೇಜ್ ಆಗಿದ್ದಾರೆ.
ಶನಿವಾರ ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದು ಕಬೀರ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಇವರಿಗೆ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಶುಭ ಹಾರೈಸಿದ್ದಾರೆ.
ಇನ್ನು ಕಿಚ್ಚ ಸುದೀಪ್ 'Wohh..ತುಂಬಾ ಖುಷಿಯಾಯ್ತು. ಶುಭವಾಗಲಿ. ಚೆನ್ನಾಗಿ ಅಡುಗೆ ಮಾಡಿ. ನಾನು ನಿಮಗಿಂತ ಫಿಟ್ಟಾಗಿ ಕಾಣಿಸುತ್ತೇನೆ. ಇಬ್ಬರು ಹ್ಯಾಪಿಯಾಗಿರಿ' ಎಂದು ಕಾಲೆಳೆದು ಟ್ವೀಟ್ ಮಾಡಿದ್ದಾರೆ. ಹೆಬ್ಬುಲಿ ಚಿತ್ರದ ನಂತರ ಕಬೀರ್ 'ಪೈಲ್ವಾನ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
