ಚಿತ್ರೀಕರಣ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಿಕಾಶ ಪಟೇಲ್ ತಮಾಷೆಯಾಗಿ ಹೇಳಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಪ್ರಭುದೇವ ಅವರನ್ನು ನಿಕಾಶಾ ಮದುವೆಯಾಗುತ್ತಾರೆ ಎಂಬುದಾಗಿ ವದಂತಿ ಹಬ್ಬಿದೆ.
ಮುಂಬೈ (ಮೇ.27): ನಮಸ್ತೆ ಮೇಡಂ, ಡಕೋಟಾ ಪಿಕ್ಚರ್, ಅಲೋನ್, ವರದನಾಯಕ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟಿ ನಿಕೇಶಾ ಪಟೇಲ್ ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಾ ಅವರನ್ನು ವಿವಾಹವಾಗುತ್ತಿರುವ ಬಗ್ಗೆ ಗಾಳಿ ಸುದ್ದಿ ಹಬ್ಬಿದೆ.
ಚಿತ್ರೀಕರಣ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಿಕಾಶ ಪಟೇಲ್ ತಮಾಷೆಯಾಗಿ ಹೇಳಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಪ್ರಭುದೇವ ಅವರನ್ನು ನಿಕೇಶಾ ಮದುವೆಯಾಗುತ್ತಾರೆ ಎಂಬುದಾಗಿ ವದಂತಿ ಹಬ್ಬಿದೆ.
ಮಾಧ್ಯಮದವರು ಹತ್ತಾರು ಬಾರಿ ಈಕೆಗೆ ಕರೆ ಮಾಡಿ ಪ್ರಭುದೇವ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ತಿಳಿಸಿ ಎಂದು ತಲೆ ತಿನ್ನುತಿದ್ದರಂತೆ. ಕೊನೆಗೆ ರೋಸಿ ಹೋದ ನಟಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟೀಕರಣ ನೀಡಿ ಯಾವುದೋ ಒಂದು ಸಂದರ್ಭದಲ್ಲಿ ತಮಾಷೆಯಾಗಿ ಹೇಳಿದ್ದು ನಿಜ. ನಾನು ಪ್ರಭುದೇವ ಅವರನ್ನು ಮದುವೆಯಾಗುತ್ತಿಲ್ಲ. ಸುದ್ದಿ ಸಂಪೂರ್ಣ ಸುಳ್ಳು. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಅದು ಬಿಟ್ಟರೆ ನನಗೆ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುತ್ತೇನೆ ಎಂದು ತಿಳಿಸಿದ್ದಾರೆ.

