ಆದರೆ ಈಗಾಗಲೇ ಅತೀ ಹೆಚ್ಚು ದರಕ್ಕೆ ಮುಂಚಿತವಾಗಿ ಬುಕ್ಕಿಂಗ್ ಮಾಡಿದವರು ಅನ್ವಯವಾಗುವುದಿಲ್ಲ.
ಬೆಂಗಳೂರು(ಮೇ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾ ಪ್ರೇಮಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಥಿಯೇಟರ್ಗಳಲ್ಲಿ ಏಕರೂಪ ದರ 200 ರೂ. ನಿಗದಿಪಡಿಸಿ ಸರ್ಕಾರ ಆದೇಶ ಜಾರಿಗೊಳಿಸಿದೆ. ಎಲ್ಲ ಭಾಷೆಯ ಚಲನಚಿತ್ರಗಳಿಗೂ 200 ರೂ. ಟಿಕೆಟ್ ದರ ಕಡ್ಡಾಯ. ಮಲ್ಟಿಪೆಕ್ಸ್ಗಳಲ್ಲಿ ಗೋಲ್ಡ್ ಕ್ಲಾಸ್ ಸ್ಕ್ರೀನ್ಗಳಿಗೆ ಹಾಗೂ ಐಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಹೊಸ ಆದೇಶ ಅನ್ವಯ ಇರುವುದಿಲ್ಲ. ಆದರೆ ಈಗಾಗಲೇ ಅತೀ ಹೆಚ್ಚು ದರಕ್ಕೆ ಮುಂಚಿತವಾಗಿ ಬುಕ್ಕಿಂಗ್ ಮಾಡಿದವರು ಅನ್ವಯವಾಗುವುದಿಲ್ಲ.
