ನೀನಾಸಂ ಸತೀಶ್ ಅಭಿನಯದ 'ಟೈಗರ್ ಗಲ್ಲಿ' ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಡಬಲ್ ರೋಲ್'ನಲ್ಲಿ ಸತೀಶ್ ನೀನಾಸಂ ಘರ್ಜನೆ ಬಹುವಾಗಿಯೇ ಇಷ್ಟವಾಗುತ್ತದೆ.
ಬೆಂಗಳೂರು (ಅ.27): ನೀನಾಸಂ ಸತೀಶ್ ಅಭಿನಯದ 'ಟೈಗರ್ ಗಲ್ಲಿ' ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಡಬಲ್ ರೋಲ್'ನಲ್ಲಿ ಸತೀಶ್ ನೀನಾಸಂ ಘರ್ಜನೆ ಬಹುವಾಗಿಯೇ ಇಷ್ಟವಾಗುತ್ತದೆ.
ಮಾಸ್ ಹೀರೋ ಥರವೇ ಸತೀಶ್ ಇಡೀ ಚಿತ್ರದಲ್ಲಿ ಕಂಗೊಳಿಸುತ್ತಾರೆ.ಹಾಗೇನೆ ನಿರ್ದೇಶಕ ರವಿ ಶ್ರೀವತ್ಸ ಈ ನಾಯಕ ನಟನಿಗೆ ಅದ್ಭುತ ಡೈಲಾಗಳನ್ನೇ ಇಟ್ಟಿದ್ದಾರೆ. ಆಕ್ಷನ್ ಕೂಡ ಭರ್ಜರಿಯಾಗಿಯೇ ಮಾಡಿಸಿದ್ದಾರೆ. 12 ವರ್ಷದ ನಂತರ ಅಭಿನಯಿಸಿರೋ ಪೂಜಾ ಲೋಕೇಶ್ ವೈಬ್ರಂಟ್ ಕ್ಯಾರೆಕ್ಟರನ್ನೇ ಚಿತ್ರದಲ್ಲಿ ನಿರ್ವಹಿಸಿರೋದು.9 ಜನ ಡೈರೆಕ್ಟರ್ ಅಭಿನಯವೂ ಮೆಚ್ಚುವಂತಹದ್ದೇ ಆಗಿದೆ. ಅದರಲ್ಲೂ ನಿರ್ದೇಶಕ ಶಿವಮಣಿ ಅಂತೂ ಇಡೀ ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ. ಅಯ್ಯಪ್ಪ ಶರ್ಮ,ಗಿರಿರಾಜ್,ಸಾಯಿ ಕೃಷ್ಣ ಎಲ್ಲರೂ ಡೈರೆಕ್ಟರೇ. ಇವರ ಪಾತ್ರಕ್ಕೂ ಇಲ್ಲಿ ಭಾರೀ ಮಹತ್ವವೇ ಇದೆ. ಉಳಿದಂತೆ ಚಿತ್ರದಲ್ಲಿ ಭಾವನಾ ರಾವ್ ಗ್ಲಾಮರ್ ಡಾಲ್ ಆಗಿಯೇ ಹೊಳೀತಾರೆ. ನವ ನಟಿ ರೋಷಿಣಿ ಚಿತ್ರದಲ್ಲಿ ಪೋಲಿಸ್ ಆಗಿ ಆವಾಜ್ ಆಗುತ್ತಾರೆ..ಟೈಗರ್ ಥರವೇ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಘರ್ಜಿಸೋ ನೀನಾಸಂ ಸತೀಶ್ ನಿಮಗೆ ಇಲ್ಲಿ ಬೇರೆ ಥರವೇ ಕಾಣಿಸುತ್ತಾರೆ. ಮಿಸ್ ಮಾಡದೇ ನೋಡಿ.
