Asianet Suvarna News Asianet Suvarna News

ನಾನು ವೋಡ್ಕಾ ಆದ್ರೆ ರಶ್ಮಿಕಾ ತೀರ್ಥ; ಚಮಕ್ ಬಗ್ಗೆ ಗಣೇಶ್ ಮಾತುಗಳು

ಸಿಂಪಲ್ ಕತೆ, ಶ್ರೀಮಂತಿಕೆಯ ನಿರೂಪಣೆ. ಕಲರ್'ಫುಲ್ ಪಾತ್ರಗಳು, ಕೇಳುವಂತ ಹಾಡು ಮತ್ತು ಸಂಭಾಷಣೆ. ಇಂಪಾಗಿರುವ ಸಂಗೀತ. ದು ಸುನಿ ಚಿತ್ರಗಳ ಹೈಲೈಟ್ ಎನ್ನುವ ಚಮಕ್. ಚಿತ್ರದ ಬಗ್ಗೆ ಗಣೇಶ್ ಚಮಕ್ ಮಾತು ಇಲ್ಲಿದೆ.

Ganesh Exclusive talk about his upcoming movie Chamak

ಬೆಂಗಳೂರು (ಡಿ.29): ಸಿಂಪಲ್ ಕತೆ, ಶ್ರೀಮಂತಿಕೆಯ ನಿರೂಪಣೆ. ಕಲರ್'ಫುಲ್ ಪಾತ್ರಗಳು, ಕೇಳುವಂತ ಹಾಡು ಮತ್ತು ಸಂಭಾಷಣೆ. ಇಂಪಾಗಿರುವ ಸಂಗೀತ. ದು ಸುನಿ ಚಿತ್ರಗಳ ಹೈಲೈಟ್ ಎನ್ನುವ ಚಮಕ್. ಚಿತ್ರದ ಬಗ್ಗೆ ಗಣೇಶ್ ಚಮಕ್ ಮಾತು ಇಲ್ಲಿದೆ.  

1.  ಬೆಡ್‌ರೂಮ್ ಲೈಟ್ ನೋಡಿದಾಗಲೇ ನಿಮ್ಮ ಚಿತ್ರದ ಟೀಸರ್ ನೆನಪಿಸಿಕೊಳ್ಳುವವರೇ ಹೆಚ್ಚಾಗಿದ್ದಾರಲ್ಲ?

ಅಯ್ಯೋ ಹಾಗಿದ್ದರೆ ನಿಮ್ ಮನೆ ಬೆಡ್ ರೂಮ್ ಲೈಟ್ ಆರಿಸಿಲ್ಲ ಅಂತನ್ನಿ!

2. ಹಾಗಂತ ಎಲ್ಲರಿಗೂ ಬೆಡ್ ರೂಮ್ ಲೈಟ್ ಆರಿಸೋ ಚಾನ್ಸ್ ಇರಲ್ವಲ್ಲ?

ಅದಕ್ಕೆ ನಾವು ಹೇಳುತ್ತಿರುವುದು ನಮ್ಮ ‘ಚಮಕ್’ ನೋಡಕ್ಕೆ ಬನ್ನಿ ಅಂತ. ಈ ಸಿನಿಮಾ ನೋಡಿದರೆ ನಾವು ಈಗಾಗಲೇ ಟೀಸರ್‌ನಲ್ಲಿ ತೋರಿಸಿರುವ ಟೀಸರ್ ಹಿಂದಿನ ಗುಟ್ಟು ನಿಮಗೆ  ಗೊತ್ತಾಗುತ್ತದೆ.

3. ಪದೇ ಪದೇ ಚಮಕ್ ನೋಡಿ ಅಂತಿದ್ದೀರಲ್ಲ, ಚಿತ್ರದಲ್ಲಿ ಏನೆಲ್ಲ ಚಮಕ್ ಗಳಿವೆ?

ನಾನು ನೀರಿನ ಥರ ಕಾಣೋ ವೋಡ್ಕ ಇದ್ದಂತೆ. ರಶ್ಮಿಕಾ ಮಂದಣ್ಣ ನೀರಿನಂತೆ ಕಾಣೋ ತೀರ್ಥ ಇದ್ದಂತೆ. ಸಾಮಾನ್ಯವಾಗಿ ನೀರು ಮತ್ತು ವೋಡ್ಕ್ ಮಿಕ್ಸ್ ಆಗುತ್ತದೆ. ಆದರೆ, ತೀರ್ಥ ಮತ್ತು ವೋಡ್ಕ ಮಿಕ್ಸ್ ಆಗಲ್ಲ. ಒಂದು ವೇಳೆ ಮಿಕ್ಸ್ ಆದರೆ ಹೇಗಿರುತ್ತದೆ ಎನ್ನುವ ಕುತೂಹಲದಲ್ಲಿ ಹತ್ತಾರು ಚಮಕ್‌ಗಳು ಹುಟ್ಟಿಕೊಳ್ಳುತ್ತವೆ. ಅದರ ಒಂದು ಸಣ್ಣ ಸ್ಯಾಂಪಲ್ ಫಸ್ಟ್ ನೈಟ್ ಟೀಸರ್ ಮತ್ತು ಡೈಲಾಗ್. ಅದರಲ್ಲೂ ನನ್ನದು ಪ್ರಸೂತಿ ತಜ್ಞನ ಪಾತ್ರ. ಆ ಪಾತ್ರದಲ್ಲಿ ನಾನು ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ. ಅವು ಚಿತ್ರದ ಎಂಟರ್‌ಟೈನ್‌ಮೆಂಟ್.

4. ಅದೆಲ್ಲ ಸರಿ, ಈ ವೋಡ್ಕ- ತೀರ್ಥ ಅಂತಿದ್ದೀರಲ್ಲ ಏನಿದರರ್ಥ?

ನಾನು ಫಾರಿನ್‌ನಿಂದ ಬರುವ ಹುಡುಗ. ನನಗೆ ಸಂಪ್ರದಾಯಸ್ಥ ಹುಡುಗಿಯನ್ನು ಮದುವೆಯಾಗುವ ಆಸೆ. ಒಂದು ಮದುವೆ ಕಾರ್ಯಕ್ರಮದಲ್ಲಿ ನಾಯಕಿಯನ್ನು ನೋಡುತ್ತೇನೆ. ಸಂಪ್ರದಾಯಕ್ಕೆ ಮತ್ತೊಂದು ಹೆಸರಿನಂತೆ ಕಾಣುವ ನಾಯಕಿ, ನನಗೆ ನೀರಿನಂತೆ ಕಾಣುತ್ತಾರೆ. ಆಕೆಯನ್ನು ನಾನು ಮದುವೆ ಆಗುತ್ತೇನೆ. ಮದುವೆ ಆದ ಮೇಲೆ ಗೊತ್ತಾಗುತ್ತದೆ ಅದು ನೀರಿನ ರೂಪದಲ್ಲಿರೋ ತೀರ್ಥ ಅಂತ. ನಾನೇನು ಕಮ್ಮಿ ಇಲ್ಲ. ನಾನು ಒಳ್ಳೆಯ ಹುಡುಗ ಅಂತ ಪೋಸು ಕೊಟ್ಟಿಕೊಂಡಿರುವ ವೋಡ್ಕ ಹುಡುಗ. ಹೊರಗೆ ಬೇರೆ ರೀತಿಯ ಕಾಣುತ್ತಲೇ, ಒಳಗೆ ಮತ್ತೊಂದು ಮುಖ ಹೊತ್ತವರು ಒಂದಾಗುವಂತಹ ಕತೆ ಇದು. ಹೀಗಾಗಿ ನೋಡಕ್ಕೆ ಕಲ್ಮಶವಿಲ್ಲದ ನೀರಿನಂತೆ ಕಾಣುವವರ ಅಸಲಿ ಕತೆ ಶುರುವಾಗುವುದು ಇಬ್ಬರು ಮದುವೆಯಾದ ಮೇಲೆ.

5. ಇಷ್ಟಕ್ಕೇ ನಿಮಗೆ ಈ ಕತೆ ಇಷ್ಟವಾಯಿತೇ?

ನಾನು ಇಲ್ಲಿಯವರೆಗೂ ನಿಮಗೆ ಹೇಳಿದ್ದು ಕೇವಲ ಮನರಂಜನೆಯ ಅಂಶಗಳನ್ನು ಮಾತ್ರ. ಇಲ್ಲಿ ಕೌಟುಂಬಿಕ ಮೌಲ್ಯಗಳಿವೆ. ಜೀವನದಲ್ಲಿ ಏನೇ ತರಲೆ, ತುಂಟತನಗಳು, ಹುಡುಗಾಟಿಕೆ ಮಾಡಿದರೂ ಸಂಬಂಧಗಳು ಮುಖ್ಯ. ಸಂಬಂಧಗಳಿಗೆ ಬೆಲೆ ಕೊಡಬೇಕು ಎನ್ನುವ ಭಾವನಾತ್ಮಕ ತಳಹದಿ ಈ ಚಿತ್ರದ ಕತೆಗೆ ಇದೆ. ಇದೇ ಸಿನಿಮಾದ ನಿಜವಾದ ಪಿಲ್ಲರ್. ಹತ್ತಿರ ಇದ್ದಾಗ ಗೊತ್ತಾ

ಗದ ವ್ಯಕ್ತಿಗಳ ಮಹತ್ವ ದೂರವಾದಾಗ ಹೇಗೆ ಗೊತ್ತಾ ಗುತ್ತದೆ? ಇದನ್ನು ಎಷ್ಟು ಸರಳವಾಗಿ, ಮನರಂಜನೆಯಾಗಿ ಹೇಳುವುದಕ್ಕೆ ಸಾಧ್ಯವೋ ಅಷ್ಟು ಸರಳೀಕರಣ ಮಾಡಿ ಹೇಳಿದ್ದೇವೆ. ಪಾತ್ರಗಳು ರೂಪಿಸಿರುವ ರೀತಿ ನನಗೆ ಇಷ್ಟವಾಯಿತು. ಒಬ್ಬ ಡಾಕ್ಟರ್ ಹೀಗೂ ಇರಬಹುದಾ ಅನ್ನುವ ಅಚ್ಚರಿಮೂಡಿಸುತ್ತದೆ.

6. ಸಿಂಪಲ್ ಸುನಿ ಸಿನಿಮಾ ಕಟ್ಟುವ ರೀತಿ ಬಗ್ಗೆ ಹೇಳುವುದಾದರೆ?

ನಾನು ಸುನಿ ಅವರಿಂದ ಈ ಕತೆ ಕೇಳಿದ್ದು ಸಕಲೇಶಪುರದಲ್ಲಿ. ಇದು ನನ್ನ ಲಕ್ಕಿ ಜಾಗ ಕೂಡ. ಒಂದು ಸಾಲಿನ ಕತೆ ಹೇಳಿ ಹೋದವರು ನಾಲ್ಕು ತಿಂಗಳು ಕಳೆದ ಮೇಲೆ ಮೈಸೂರಿಗೆ ಬಂದು ಇದ್ದಕ್ಕಿದ್ದಂತೆ ಕತೆ ಪೂರ್ತಿ ಹೇಳುತ್ತೇನೆ ಎಂದರು. ಬೆಳಗಿನ ಜಾವ ಅಂದರೆ 4.45 ನಿಮಿಷಕ್ಕೆ ಕತೆ ಹೇಳುವುದಕ್ಕೆ ಶುರು ಮಾಡಿದರು. ಸ್ಕ್ರೀನ್ ಪ್ಲೇ, ಡೈಲಾಗ್‌ಗಳಲ್ಲೇ ನನಗೆ ಸಿನಿಮಾ ತೋರಿಸಿದರು. ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿರುವ ಫ್ಯಾಮಿಲಿ ಮನೆಯ ಹುಡುಗಿಯನ್ನು ಮದುವೆ ಆಗಲು ಬರುವಾಗ ಆಗುವ ಫಜೀತಿಗಳು ತುಂಬಾ ಚೆನ್ನಾಗಿವೆ. ಇಂಥ ದೃಶ್ಯಗಳಲ್ಲಿ ಸಿಂಪಲ್ ಸುನಿ ಡೈಲಾಗ್‌ಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸರಳವಾದ ಕತೆಗಳನ್ನು ಅದ್ಧೂರಿಯಾಗಿ, ಕಲರ್‌ಫುಲ್ಲಾಗಿ ಹೇಳುವ ಶೈಲಿ ಸುನಿ ಅವರಿಗೆ ಗೊತ್ತಿದೆ.

7. ಚಿತ್ರದ ಉಳಿದ ಹೈಲೈಟ್‌ಗಳೇನು?

ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ. ಜೂಡಾ ಸ್ಯಾಂಡಿ ಅವರ ಸಂಗೀತ ಹಾಗೂ ಹಾಡುಗಳು. ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟಿಕೊಂಡಿರುವ ಟಿ ಆರ್ ಚಂದ್ರಶೇಖರ್ ಅವರ ಅದ್ಧೂರಿ  ನಿರ್ಮಾಣ. ಇವುಗಳ ಜತೆಗೆ ನಾನು ಮತ್ತು ರಶ್ಮಿಕಾ ಮಂದಣ್ಣ ಅವರ ಚಮಕ್‌'ಗಳು.

ಚಮಕ್ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ;

ಸಂದರ್ಶನ: ಆರ್.ಕೇಶವಮೂರ್ತಿ

 

Follow Us:
Download App:
  • android
  • ios