ಇಷ್ಟಕ್ಕೂ ಸ್ಪರ್ಧೆ ಏನು? ‘ವೈರಾ’ ಚಿತ್ರ ನೋಡಿಕೊಂಡು ಆ ಚಿತ್ರದ ಟಿಕೇಟ್‌ನೊಂದಿಗೆ ಬರುವ ಪ್ರೇಕ್ಷಕರಿಗೆ ಚಿತ್ರತಂಡದಿಂದ ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಚಿತ್ರತಂಡ ಕೇಳುವ ಆ 7 ಪ್ರಶ್ನೆಗಳಿಗೂ ತಪ್ಪಿಲ್ಲದೆ ಉತ್ತರ ಕೊಟ್ಟವರಿಗೆ ಲಕ್ಕಿ ಡ್ರಾ ಮೂಲಕ ಮೋಟಾರ್ ಸೈಕಲ್ ಬಹುಮಾನವಾಗಿ ನೀಡಲಾಗುತ್ತಿದೆ.
ನವರಸನ್ ನಿರ್ದೇಶಿಸಿ ನಟಿಸಿರುವ ‘ವೈರಾ’ಇನ್ನೇನು ತೆರೆಗೆ ಸಿದ್ಧವಾಗುತ್ತಿದೆ. ಬಿಡುಗಡೆಗೆ ಹತ್ತಿರ ಬರುತ್ತಿದ್ದಂತೆಯೇ ಈ ಚಿತ್ರದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರು ಪ್ರೇಕ್ಷಕರಿಗಾಗಿಯೇ ಒಂದು ಹೊಸ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಈ ಹಿಂದೆ ‘ರಥಾವರ’ ಚಿತ್ರ ನಿರ್ಮಿಸಿ ಗೆದ್ದವರು. ಈಗ ‘ವಸುಧೈವ ಕುಟುಂಬಕಂ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ನಡುವೆ ‘ರಥಾವರ’ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ‘ವೈರಾ’ ಚಿತ್ರದ ಬಿಡುಗಡೆಗೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ
ಅವರೊಂದು ಹೊಸ ಅಫರ್ ಮುಂದಿಟ್ಟಿದ್ದಾರೆ. ಇಷ್ಟಕ್ಕೂ ಸ್ಪರ್ಧೆ ಏನು? ‘ವೈರಾ’ ಚಿತ್ರ ನೋಡಿಕೊಂಡು ಆ ಚಿತ್ರದ ಟಿಕೇಟ್ನೊಂದಿಗೆ ಬರುವ ಪ್ರೇಕ್ಷಕರಿಗೆ ಚಿತ್ರತಂಡದಿಂದ ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಚಿತ್ರತಂಡ ಕೇಳುವ ಆ 7 ಪ್ರಶ್ನೆಗಳಿಗೂ ತಪ್ಪಿಲ್ಲದೆ ಉತ್ತರ ಕೊಟ್ಟವರಿಗೆ ಲಕ್ಕಿ ಡ್ರಾ ಮೂಲಕ ಮೋಟಾರ್ ಸೈಕಲ್ ಬಹುಮಾನವಾಗಿ ನೀಡಲಾಗುತ್ತಿದೆ. ಇದೊಂದು ರೀತಿಯಲ್ಲಿ ಹೊಸ ರೀತಿಯ ಸ್ಪರ್ಧೆ.
ಪ್ರೇಕ್ಷಕರು ತೆಗೆದುಕೊಳ್ಳುವ ಎಲ್ಲ ಟಿಕೇಟ್ಗಳನ್ನು ಒಂದು ಕಡೆ ಸಂಗ್ರಹಿಸಿ ಅವುಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡುತ್ತೇವೆ. ಹೀಗೆ ಆಯ್ಕೆ ಆದ ಟಿಕೇಟ್ ಗಳನ್ನು ಹೊಂದಿರುವವರಿಗೆ 7 ಪ್ರಶ್ನೆಗಳನ್ನು ಚಿತ್ರಮಂದಿರದ ಮುಂದೆಯೇ ಕೇಳುತ್ತೇವೆ. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಒಂದು ದ್ವಿಚಕ್ರ ವಾಹನವನ್ನು ಬಹುಮಾನವಾಗಿ ವಿತರಣೆ ಮಾಡಲಾವುದು. ಈ ಸ್ಪರ್ಧೆಗಾಗಿ 50 ಬೈಕ್ಗಳನ್ನು ತರಿಸಲಾಗುತ್ತಿದೆ. ಮೊದಲ ದಿನ ಮೊದಲ ಶೋ ನೋಡಿಕೊಂಡು ಬಂದವರ ಪೈಕಿ ಯಾರಿಗೆ ದ್ವಿಚಕ್ರ ವಾಹನ ಸಿಗುತ್ತದೆಂಬುದನ್ನು ಚಿತ್ರ ತೆರೆಗೆ ಬಂದ ಮೇಲೆ ನೋಡಬೇಕು’ ಎನ್ನುತ್ತಾರೆ ನಿರ್ಮಾಪಕ ಧರ್ಮಶ್ರೀ ಮಂಜುನಾಥ್.?
(ಕನ್ನಡಪ್ರಭ ವಾರ್ತೆ)
