ಬೆಂಗಳೂರಿನಲ್ಲೇ ಪ್ರತಿಷ್ಠಿತವಾದ ಪ್ರೆಸ್ಟೀಜ್ ಆ್ಯಬ್‌ಶಾಟ್ ಅಪಾಟ್ಮೆರ್ಂಟಿನ ಎರಡು ಪೆಂಟ್‌ಹೌಸ್‌ಗಳನ್ನು ಯಶ್ ಅಮ್ಮ ಯಶ್ ಹಾಗೂ ರಾಧಿಕಾರಿಗೆ ಕೊಡಿಸಿದ್ದಾರಂತೆ. ಮದುವೆ ಗೊತ್ತಾಗುತ್ತಿದ್ದಂತೆ ಮಗ ಸೊಸೆಗೊಂದು ಮನೆ ಮಾಡಿಕೊಡ ಬೇಕು ಅಂದುಕೊಂಡು ಹುಡುಕಾಟ ಆರಂಭಿಸಿದ ಪುಷ್ಪಾ ಅವರು, ನಾಲ್ಕು ತಿಂಗಳ ಹಿಂದೆ ಪ್ರೆಸ್ಟೀಜ್ ಆ್ಯಬ್ ಶಾಟ್ ಅಪಾರ್ಟ್‌ಮೆಂಟು ಗೊತ್ತುಮಾಡಿ, ಮಗ ಸೊಸೆಗೆ ಅದೇ ಚೆನ್ನಾಗಿದೆ ಎಂದುಕೊಂಡು ಆ ಮನೆಯ ವ್ಯವಹಾರ ಕುದುರಿಸಿದ್ದಾಗಿದೆ.
ಇತ್ತೀಚೆಗೆ ಕನ್ನಡಪ್ರಭದ ಜೊತೆ ಮಾತಾಡುತ್ತಾ, ತಾವು ಹೊಸ ಮನೆ ಕೊಂಡು ಕೊಂಡಿರುವ ಸಂತೋಷದ ಸುದ್ದಿಯನ್ನು ರಾಧಿಕಾ ಯಶ್ ಹಂಚಿಕೊಂಡಿದ್ದರು. ಇದೀಗ ಯಶ್ ಆ ಸುದ್ದಿಯನ್ನು ದೃಢೀಕರಿಸಿದ್ದಾರೆ. ಇಷ್ಟರಲ್ಲೇ ಯಶ್ ಮತ್ತು ರಾಧಿಕಾ ಹೊಸ ಮನೆಯಲ್ಲಿ ಸಂಸಾರ ಹೂಡುವುದು ಖಚಿತಗೊಂಡಿದೆ.
ಬೆಂಗಳೂರಿನಲ್ಲೇ ಪ್ರತಿಷ್ಠಿತವಾದ ಪ್ರೆಸ್ಟೀಜ್ ಆ್ಯಬ್ಶಾಟ್ ಅಪಾಟ್ಮೆರ್ಂಟಿನ ಎರಡು ಪೆಂಟ್ಹೌಸ್ಗಳನ್ನು ಯಶ್ ಅಮ್ಮ ಯಶ್ ಹಾಗೂ ರಾಧಿಕಾರಿಗೆ ಕೊಡಿಸಿದ್ದಾರಂತೆ. ಮದುವೆ ಗೊತ್ತಾಗುತ್ತಿದ್ದಂತೆ ಮಗ ಸೊಸೆಗೊಂದು ಮನೆ ಮಾಡಿಕೊಡ ಬೇಕು ಅಂದುಕೊಂಡು ಹುಡುಕಾಟ ಆರಂಭಿಸಿದ ಪುಷ್ಪಾ ಅವರು, ನಾಲ್ಕು ತಿಂಗಳ ಹಿಂದೆ ಪ್ರೆಸ್ಟೀಜ್ ಆ್ಯಬ್ ಶಾಟ್ ಅಪಾರ್ಟ್ಮೆಂಟು ಗೊತ್ತುಮಾಡಿ, ಮಗ ಸೊಸೆಗೆ ಅದೇ ಚೆನ್ನಾಗಿದೆ ಎಂದುಕೊಂಡು ಆ ಮನೆಯ ವ್ಯವಹಾರ ಕುದುರಿಸಿದ್ದಾಗಿದೆ.
ಇನ್ನೇನು ಕೆಲವು ವಾರಗಳಲ್ಲಿ, ಮನೆಯ ಒಳಾಂಗಣದ ಕೆಲಸ ಮುಗಿಯುತ್ತಿದ್ದಂತೆ ಯಶ್-ರಾಧಿಕಾ ಆ ಮನೆಗೆ ಹೋಗಲಿದ್ದಾರೆ. ಅದೇ ಅಪಾರ್ಟ್ಮೆಂಟಿನ ಎಂಟನೇ ಮಹಡಿಯಲ್ಲಿ ಅಂಬರೀಷ್ ವಾಸ ಮಾಡುತ್ತಾರೆ.
ಅನಿಲ್ ಲಾಡ್ ಮುಂತಾದ ರಾಜಕೀಯ ನಾಯಕರೂ ಅಲ್ಲಿ ಮನೆ ಕೊಂಡಿದ್ದಾರೆ. ಯಶ್ ಅವರು ಕೊಂಡು ಕೊಂಡಿರುವುದು ತುತ್ತತುದಿಯ ಎರಡು ಪೆಂಟ್ ಹೌಸ್. ಅಲ್ಲಿ ನಿಂತು ನೋಡಿದರೆ ಗಾಲ್ಫ್ಕೋರ್ಸ್, ವಿಧಾನಸೌಧ, ಮುಖ್ಯ ಮಂತ್ರಿಗಳ ಮನೆ ಎಲ್ಲವೂ ನಾಲ್ಕು ದಿಕ್ಕುಗಳಲ್ಲಿ ಕಾಣಿಸುವಂತಿದೆ. ಬಹುಶಃ ಬೆಂಗಳೂರಲ್ಲೇ ಅತ್ಯಂತ ದುಬಾರಿ ಅಪಾಟ್ಮೆರ್ಂಟ್ ಇದೆಂದರೂ ತಪ್ಪಿಲ್ಲ. ಅಮ್ಮನಿಗೆ ಅಂಥದ್ದೊಂದು ಮನೆ ಕೊಡಿಸಬೇಕು ಅನ್ನುವ ಆಸೆಯಿತ್ತು. ಇತ್ತೀಚೆಗಂತೂ ಸಿನಿಮಾ ಹಾಗೂ ಮತ್ತಿತರ ಕೆಲಸಗಳಿಗೋಸ್ಕರ ನಾನು ತುಂಬಾ ಸುತ್ತಾಡುತ್ತಿದ್ದೇನೆ.
ಸಿಕ್ಕಾಪಟ್ಟೆ ಪ್ರಯಾಣ ಮಾಡುತ್ತಿದ್ದೇನೆ. ಹೀಗಾಗಿ ನಗರದ ಮಧ್ಯಭಾಗದಲ್ಲಿ ಮನೆಯಿರಲಿ ಅಂತ ಅಮ್ಮ ಆಸೆಪಟ್ಟಿದ್ದರು. ನಾಲ್ಕೈದು ತಿಂಗಳ ಹಿಂದೆಯೇ ಈ ಮನೆಯನ್ನು ಅಮ್ಮ ಕೊಂಡುಕೊಳ್ಳಲು ನಿರ್ಧರಿಸಿದ್ದರು.ಇದು ನಮ್ಮಿಬ್ಬರಿಗೆ ಅಮ್ಮ ಕೊಟ್ಟ ಉಡುಗೊರೆ. ಸುಮಾರು 6000 ಚದರಡಿಯ ವಿಶಾಲವಾದ ಮನೆ ಅದು’ಎನ್ನುತ್ತಾರೆ ಯಶ್. ಹೊಸಮನೆಗೆ ಹೋಗಲಿರುವ ಹೊಸ ಜೋಡಿಗೆ ನಮ್ಮ ಶುಭಾಶಯ.
(ಕನ್ನಡಪ್ರಭ ವಾರ್ತೆ)
