Asianet Suvarna News Asianet Suvarna News

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ’ಗಣಪನ ಮದುವೆ’

ಬ್ರಾಹ್ಮಣ ಸಮುದಾಯದಲ್ಲಿ ಅದರಲ್ಲೂ ಹವ್ಯಕ ಸಮುದಾಯದಲ್ಲಿ ಹುಡುಗಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಹುಡುಗಿ ಸಿಗದೇ ಎಷ್ಟೋ ಜನ ಹುಡುಗರು ಅವಿವಾಹಿತರಾಗಿ ಉಳಿದಿದ್ದಾರೆ. ಎಷ್ಟೇ ಒಳ್ಳೆ ಕೆಲಸದಲ್ಲಿದ್ದರೂ, ಜಮೀನಿದ್ದರೂ ಹುಡುಗಿ ಸಿಗುವುದು ಕಷ್ಟವಾಗಿದೆ. ಅದರಲ್ಲೂ ಕೃಷಿಕ ಹುಡುಗರ ಪಾಡನ್ನೂ ಕೇಳುವುದೇ ಬೇಡ. ಹುಡುಗ ಮನೆಯಲ್ಲಿದ್ದಾರೆ. ಕೃಷಿ ಮಾಡಿಕೊಂಡಿದ್ದಾನೆ ಎಂದರೆ ಜಾತಕವೇ ಬರುವುದಿಲ್ಲ. 

Ganapana Maduve a Short movie released in youtube and got good response

ಬ್ರಾಹ್ಮಣ ಸಮುದಾಯದಲ್ಲಿ ಅದರಲ್ಲೂ ಹವ್ಯಕ ಸಮುದಾಯದಲ್ಲಿ ಹುಡುಗಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಹುಡುಗಿ ಸಿಗದೇ ಎಷ್ಟೋ ಜನ ಹುಡುಗರು ಅವಿವಾಹಿತರಾಗಿ ಉಳಿದಿದ್ದಾರೆ. ಎಷ್ಟೇ ಒಳ್ಳೆ ಕೆಲಸದಲ್ಲಿದ್ದರೂ, ಜಮೀನಿದ್ದರೂ ಹುಡುಗಿ ಸಿಗುವುದು ಕಷ್ಟವಾಗಿದೆ. ಅದರಲ್ಲೂ ಕೃಷಿಕ ಹುಡುಗರ ಪಾಡನ್ನೂ ಕೇಳುವುದೇ ಬೇಡ. ಹುಡುಗ ಮನೆಯಲ್ಲಿದ್ದಾರೆ. ಕೃಷಿ ಮಾಡಿಕೊಂಡಿದ್ದಾನೆ ಎಂದರೆ ಜಾತಕವೇ ಬರುವುದಿಲ್ಲ. ಉತ್ತರ ಕನ್ನಡ, ಸಾಗರ, ಶಿರಸಿ, ಕುಮಟಾ ಭಾಗಗಳಲ್ಲಿ ಹವ್ಯಕರ ಪ್ರಾಬಲ್ಯ ಹೆಚ್ಚಾಗಿದ್ದು ಅಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇಂತದ್ದೊಂದು ಕಥಾ ಹಂದರವನ್ನು ಇಟ್ಟುಕೊಂಡು ಕಿರುಚಿತ್ರವೊಂದು ಬಂದಿದೆ.

ವಿನಾಯಕ ಕೋಡ್ಸರ ಇದನ್ನು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರವನ್ನು ನೋಡಿದರೆ  ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತದೆ. ವಾಸ್ತವ ಸ್ಥಿತಿಯನ್ನು ನೈಜವಾಗಿ ತೆರೆಮೇಲೆ ತರಲು ಯಶಸ್ವಿಯಾಗಿದ್ದಾರೆ ವಿನಾಯಕ ಕೋಡ್ಸರ. ಇದರಲ್ಲಿ ಅಭಿನಯಿಸಿದವರೆಲ್ಲರೂ ಹೊಸ ಮುಖಗಳೇ. ಎಲ್ಲರಿಗೂ ಅಭಿನಯ ಹೊಸದು. ಎಲ್ಲರೂ ಒಳ್ಳೆಯ ಪ್ರಯತ್ನವನ್ನು ಹಾಕಿ ಉತ್ತಮ ಮನೋರಂಜನಾ ಚಿತ್ರವೊಂದನ್ನು ಕೊಟ್ಟಿದ್ದಾರೆ. ಈಗಾಗಲೇ ಯೂಟ್ಯೂಬ್’ನಲ್ಲಿ ಬಿಟ್ಟಿದ್ದು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. 

ಮಿಥಿಲಾ ಪ್ರಕಾಶನ ಬ್ಯಾನರ್ ಅಡಿಯಲ್ಲಿ ಚಿತ್ರೀಕರಿಸಲಾಗಿದ್ದು ವಿನಾಯಕ ಕೋಡ್ಸರ ನಿರ್ದೇಶಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಜಿತ್ ಬೊಪ್ಪನಹಳ್ಳಿ ಹಾಗೂ ಸುಷ್ಮಾ ಮೂಡಬಿದ್ರೆ ಬರೆದಿದ್ದಾರೆ. ಹರ್ಷ ಕೋಗೋಡು, ವಿಶ್ವ ಪ್ರೇಮಿ ವಿಜಯ್ ಸಂಗೀತ ನೀಡಿದ್ದು, ಸಂದೀಪ್ ಥಾಮಸ್ ಹಾಗೂ ಜೆಬಿನ್ ಛಾಯಾಗ್ರಹಣವಿದೆ. ವಿಶಾಲ್ ರಾಜ್ ಸಂಕಲನ ಮಾಡಿದ್ದಾರೆ.  ಪ್ರಶಾಂತ್ ದೇಸಾಯಿ, ನವಿತಾ ಜೈನ್, ವನಿತಾ ಜೈನ್, ಶ್ರೀಲಕ್ಷ್ಮೀ, ಅಜಿತ್ ಬೊಪ್ಪನಹಳ್ಳಿ, ಸುಚೇತಾ ಭಟ್, ಅಕ್ಷತಾ ಅಭಿನಯಿಸಿದ್ದಾರೆ. 

ಚಿತ್ರ ವೀಕ್ಷಿಸಲು  ಕ್ಲಿಕ್ ಮಾಡಿ 

Follow Us:
Download App:
  • android
  • ios