ಶಿಲ್ಪಾ ಗಣೇಶ್, ರಮ್ಯಾ ನಡುವೆ ಆಗಾಗ ಟ್ವೀಟ್ ಸಮರ ನಡೆಯುತ್ತಾ ಇರುತ್ತದೆ. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಗಮನ ಸೆಳೆಯುತ್ತಾರೆ. 

ಲೋಕಸಮರದ ತೀರ್ಪು ಹೊರಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿದ್ದಾರೆ. ಯಾವಾಗಲೂ ಮೋದಿಯನ್ನು ಟೀಕಿಸುವ ರಮ್ಯಾ ಮೋದಿ ಗೆಲುವಿಗೆ ವಿಶ್ ಮಾಡಿದ್ದರು.  

ರಮ್ಯಾ ಟ್ವೀಟ್ ಗೆ ಶಿಲ್ಪಾ ಗಣೇಶ್ ಕಾಲೆಳೆದಿದ್ದಾರೆ. 

ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು.... ಎಂದು ಟ್ವೀಟ್ ಮಾಡಿದ್ದಾರೆ.