ಹಿಂದಿ ವಾಹಿನಿ 'ಸೋನಿ'ಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ 'ಬೇಹದ್'ನ ಶೂಟಿಂಗ್ ನಡೆಯುತ್ತಿದ್ದ ವೇಳೆ ಸೆಟ್'ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅನಾಹುತದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕುಶಾಲ್ ಟಂಡನ್, ಜೆನಿಫರ್ ವಿಂಗೇಟ್ ಹಾಗೂ ಅನೇರಿ ವಜಾನಿ ಗಾಯಗೊಂಡಿದ್ದಾರೆ.

ಮುಂಬೈ(ಫೆ.08): ಹಿಂದಿ ವಾಹಿನಿ 'ಸೋನಿ'ಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ 'ಬೇಹದ್'ನ ಶೂಟಿಂಗ್ ನಡೆಯುತ್ತಿದ್ದ ವೇಳೆ ಸೆಟ್'ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅನಾಹುತದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕುಶಾಲ್ ಟಂಡನ್, ಜೆನಿಫರ್ ವಿಂಗೇಟ್ ಹಾಗೂ ಅನೇರಿ ವಜಾನಿ ಗಾಯಗೊಂಡಿದ್ದಾರೆ.

ಲಭ್ಯವಾದ ಮಾಹಿತಿ ಅನ್ವಯ ಒಂದು ಮದುವೆ ಸೀಕ್ವೆನ್ಸ್'ನ ಶೂಟಿಂಗ್ ನಡೆಯುತ್ತಿದ್ದು, ಸ್ಕ್ರಿಪ್ಟ್'ನ ಅನ್ವಯ ಮದುವೆ ಮಂಟಪದ ಸೀನ್ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಸೆಟ್'ನಲ್ಲಿ ಬೆಂಕಿ ಕಾಣಿಸಿಕೊಂಡು ಪಾತ್ರಧಾರಿಗಳು ಬೆಂಕಿ ತಗುಲಿ ಗಾಯಗೊಂಡಿದ್ದಾರೆ.

ಬೆಂಕಿಯಿಂದಾಗಿ ಕುಶಾಲ್ ಟಂಡನ್'ರವರ ಕುತ್ತಿಗೆ ಭಾಗ, ಜೆನಿಫರ್'ರವರ ಬೆನ್ನು ಹಾಗೂ ಅನೇರಿಯವರ ಕೈಗೆ ಗಾಯಗಳಾಗಿವೆ. ಈ ದುರಂತದಿಂದಾಗಿ ತಂಡ ಶೂಟಿಂಗ್'ನ್ನು ಸಧ್ಯಕ್ಕೆ ಸ್ಥಗಿತಗೊಳಿಸಿದೆ. '

ಧಾರವಾಹಿಯ ಕಾರ್ಯಕಾರಿ ನಿರ್ದೇಶಕ ಪ್ರೀತಿಶ್ ಘಟನೆ ನಡೆದಿರುವುದನ್ನು ಖಚಿತಪಡಿಸಿ 'ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ಸೆಟ್'ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಿಜ, ಶೀಘ್ರದಲ್ಲೇ ಧಾರವಾಹಿಯ ಶೂಟಿಂಗ್'ನ್ನು ಆರಂಭಿಸಲಿದ್ದೇವೆ' ಎಂದಿದ್ದಾರೆ. ಸೋನಿ ಚಾನೆಲ್'ನಲ್ಲಿ ಪ್ರಸಾರವಾಗುವ ಈ ಧಾರವಾಹಿ 2016ರ ಅಕ್ಟೋಬರ್ 11 ರಂದು ಆರಂಭವಾಗಿತ್ತು. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಧಾರವಾಹಿಯಾಗಿದೆ.