Asianet Suvarna News Asianet Suvarna News

ಈ ಚಿತ್ರಕತೆ ಕೇಳಿದಾಗ ನನ್ನ ತಾಯಿ ಕಂಡೆ : ರಾಘವೇಂದ್ರ ರಾಜ್‌ಕುಮಾರ್

ರಾಘವೇಂದ್ರ ರಾಜ್‌ಕುಮಾರ್ ನಿಖಿಲ್ ಮಂಜು ನಿರ್ದೇಶನದ, ಕುಮಾರ್ ನಿರ್ಮಾಣದ, ರಾಘವೇಂದ್ರ ರಾಜ್‌ಕುಮಾರ್ ನಟನೆಯಲ್ಲಿ ‘ಅಮ್ಮನ ಮನೆ’ ಹೆಸರಿನ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿತು. 14 ವರ್ಷಗಳ ನಂತರ ಬಣ್ಣ ಹಚ್ಚುವಂತೆ ಮಾಡಿದರೆ ಈ ಚಿತ್ರದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೇನು?

Film script reminds me of my mother: Ragavendra Rajkumar
Author
Bengaluru, First Published Aug 18, 2018, 11:54 AM IST

* ಇದು ನನ್ನ ಕಂಬ್ಯಾಕ್ ಸಿನಿಮಾ ಅಲ್ಲ. ಯಾಕೆಂದರೆ ನನ್ನಿಂದ ಆಗುತ್ತಿರುವ ಸಿನಿಮಾ ಅಲ್ಲ ಇದು. ಒಂದು ಒಳ್ಳೆಯ ಕತೆ ಇರುವ ಚಿತ್ರದಲ್ಲಿ ನಾನು ಭಾಗಿ ಆಗಿದ್ದೇನೆ ಅಷ್ಟೆ. ನಾನು ಮತ್ತೆ ನಟಿಸುವುದಿದ್ದರೆ ಯಾವತ್ತೋ ಬರುತ್ತಿದ್ದೆ. ಅದು ದೊಡ್ಡ ವಿಷಯ ಅಲ್ಲ. ಆದರೆ, ಅಮ್ಮನ ಮನೆ ಸಿನಿಮಾ ಕತೆಗಾಗಿ ನಾನು ಬಂದೆ. ಹೀಗಾಗಿ ಆ ಚಿತ್ರದ ಕತೆ ದೊಡ್ಡದು ನಾನಲ್ಲ.

* ಹೆಸರು ಕೇಳಿದಾಕ್ಷಣ ಎಲ್ಲರಿಗೂ ಅವರವರ ತಾಯಿ ನನೆಪಾಗುತ್ತಾರೆ. ನನಗೆ ಈ ಚಿತ್ರದ ಪ್ರತಿ ಸಾಲಿನ ಕತೆ ಹಾಗೂ ದೃಶ್ಯಗಳನ್ನು ಕೇಳುತ್ತಿದ್ದಾಗ ಅದರಲ್ಲಿ ನನ್ನ ತಾಯಿ ಕಂಡರು. ನನ್ನ ಜೀವನಕ್ಕೆ ತುಂಬಾ ಹತ್ತಿರವಾದ ಸಿನಿಮಾ ಇದು. ಸಾಕಷ್ಟು ದೃಶ್ಯಗಳನ್ನು ನೀವು ತೆರೆ ಮೇಲೆ ನೋಡಿದರೆ ನನ್ನ ನಿಜ ರೂಪ ಹಾಗೂ ನನ್ನ ತಾಯಿ ಅವರನ್ನು ನೋಡುತ್ತೀರಿ.

* ಹಾಸಿಗೆ ಹಿಡಿದಿದ್ದಾಗ ಅಮ್ಮ ನನ್ನ ಹತ್ತಿರ ಕರೆದು, ‘ನಟನೆ ಮಾಡಿಕೊಂಡಿದ್ದವನು ನೀನು. ನಾನೇ ಕರೆದು ನಿನಗೆ ಬೇರೆ ಜವಾಬ್ದಾರಿ ಕೊಟ್ಟು ನನ್ನ ಸಿನಿಮಾ ಕನಸುಗಳಿಗೆ ಅಡ್ಡಿಯಾದೆ ಮಗನೇ’ ಅಂತ ಬೇಸರ ಮಾಡಿಕೊಂಡಿದ್ದರು. ನಾನು ಅವರಿಗೆ ಸಮಾಧಾನ ಮಾಡಿದೆ. ಆ ನೋವನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಡಿ ಎಂದು ಕೇಳಿಕೊಂಡೆ. ಅಮ್ಮನ ಅಂದಿನ ಆಸೆಯಂತೆ ನಾನು ಮತ್ತೆ ನಟನೆಯತ್ತ ಮುಖ ಮಾಡಿದ್ದೇನೆ.

* ಈ ರಾಘವೇಂದ್ರ ರಾಜ್‌ಕುಮಾರ್ ಹಳೆಯ ನಟನಲ್ಲ. ತುಂಬಾ ಹೊಸಬ ನಾನು. ನಾನೊಂಥರ ಬಿಳಿ ಹಾಳೆ ಇದ್ದಂತೆ. ವಿದ್ಯಾರ್ಥಿ ರೀತಿ ನಿರ್ದೇಶಕರ ಮುಂದೆ ನಿಂತಿರುವೆ. ಅವರು ನನಗೆ ಹೊಸಬ ರೀತಿ ಟ್ರೀಟ್ ಮಾಡಿ ನನಗೆ ತರಬೇತಿ ನೀಡಿ ಕ್ಯಾಮೆರಾ ಮುಂದೆ ಕರೆದುಕೊಂಡು ಹೋಗಲಿ. ದೊಡ್ಡ ಮನೆಯವರು ನಟಿಸುತ್ತಿರುವ ಸಿನಿಮಾ, ರಾಘಣ್ಣ ಸಿನಿಮಾ ಅಂತ ನೋಡುವುದು ಬೇಡ.

* ದೈಹಿಕ ನ್ಯೂನತೆ ಇದ್ದರು ನಾನು ಇಲ್ಲಿ ಪೀಟಿ ಮಾಸ್ಟರ್. ನನ್ನ ಪಾತ್ರದ ಹೆಸರು ರಾಜೀವ. ದೊಡ್ಡ ಮಟ್ಟದಲ್ಲಿ ಸಾಧಕನಾಗಿ ಗುರುತಿಸಿಕೊಂಡ ನನ್ನ ಹಿಂದಿನ ತಾಯಿ ಬದುಕು ತೋರಿಸುವ ಪಾತ್ರ ನನ್ನದು. ವಯಸ್ಸಾದವರನ್ನು ನೋಡುವ ದೃಷ್ಟಿ ಕೋನ ಹೇಗಿರಬೇಕೆಂಬ ಜೀವನ್ಮುಖಿಯ ಸಂದೇಶ ಇಲ್ಲಿದೆ.

Follow Us:
Download App:
  • android
  • ios