ಸಾಮಾಜಿಕ‌ ಜಾಲತಾಣಗಳಲ್ಲಿ ಜಯಂತಿ ಇನ್ನಿಲ್ಲ : ನಟಿ ರಚಿತಾರಾಮ್ ಪೇಜ್'ನಲ್ಲೂ ಅಪಪ್ರಚಾರ !

First Published 27, Mar 2018, 11:25 PM IST
False News About Jayanthi
Highlights

ಜಯಂತಿಯವರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಅವರ ಪುತ್ರ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ್ದು, ವದಂತಿ ಹಬ್ಬಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.  

ಬೆಂಗಳೂರು(ಮಾ.27): ಅನಾರೋಗ್ಯದಿಂದ ಹಿರಿಯ ನಟಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಯ ಶಾರದೆ ಜಯಂತಿ ಇನ್ನಿಲ್ಲ ಎಂಬ ಸುಳ್ಳು ಪ್ರಚಾರ ಹರಡುತ್ತಿದೆ.

ಶ್ವೇತಾ ಗೌಡ ಹೆಸರಿನಲ್ಲಿರೋ ಫೇಸ್ ಬುಕ್‌ ಪೇಜ್'ನಲ್ಲಿ ಸುಳ್ಳು ಸುದ್ದಿ ಮೊದಲು  ಅಬ್ಬಿರಿಸಿತ್ತು.  ನಟಿ ರಚಿತಾ ರಾಮ್ ಪೇಜ್ ಹೆಸರಿನ ಪೇಜ್'ನಲ್ಲೂ ಅಪಪ್ರಚಾರ ಸುದ್ದಿ ಪೋಸ್ಟ್ ಆಗಿದೆ. ಜಯಂತಿಯವರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಅವರ ಪುತ್ರ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ್ದು, ವದಂತಿ ಹಬ್ಬಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

loader