ಪುನೀತ್ ಅಭಿನಯದ ಚಿತ್ರ ವೀಕ್ಷಣೆಗೆ ಇಲ್ಲೊಬ್ಬರು ರಜೆ ಕೇಳದ್ದಾರೆ. ಕುಟುಂಬ ಸಮೇತ ತೆರಳಬೇಕಿದ್ದು ಆನ್ ಲೈನ್ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬಾಗಲಕೋಟೆ [ಫೆ.06] ಪುನೀತ್ ರಾಜ್ ಕುಮಾರ್ ಅಭಿಮಯದ ನಹು ನಿರೀಕ್ಷಿತ ನಟಸಾವ೯ಭೌಮ ಚಿತ್ರ ವೀಕ್ಷಣೆಗಾಗಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ರಜೆ ಕೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಶೀಗಿಕೇರಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಕುಟುಂಬ ಸಮೇತ ಚಿತ್ರ ನೋಡಲು ಅವಕಾಶ ಕೋರಿ ಪಿಡಿಓಗೆ ರಜೆ ಪತ್ರ ಬರೆದಿದ್ದಾರೆ ಅನಿಲ್ ಚವ್ಹಾಣ ಎಂಬುವರು ಸಿನಿಮಾ ವೀಕ್ಷಣೆಗೆ ರಜೆ ಕೇಳಿದ್ದಾರೆ.
ನಟಸಾವ೯ಭೌಮ ಸಿನಿಮಾ ಕುಟುಂಬ ಸಮೇತ ಎಲ್ಲ ವಯಸ್ಸಿನವರು ನೋಡಬಹುದಾದ ಚಿತ್ರ. ಮೇಲಾಗಿ ಡಾ.ರಾಜ್ ಅವರ 3ನೇ ಪುತ್ರನ ಸಿನಿಮಾ ಇದಾಗಿದ್ದರಿಂದ ನೋಡಲು ರಜೆ ಕೊಡಿ ಎಂದು ಕೇಳಿದ್ದಾರೆ.
ಹೀಗಾಗಿ ಫೆ.7 ರಂದು ರಾಜ್ಯಾಂದ್ಯಂತ ಬಿಡುಗಡೆಯಾಗುವ ನಟಸಾವ೯ಭೌಮ ಚಿತ್ರ ವೀಕ್ಷಣೆಗೆ ಅವಕಾಶ ಕೋರಿ ಪತ್ರ ಬರೆದಿದ್ದಾರೆ. ಟಿಕೆಟ್ ಗಾಗಿ ಆನ್ ಲೈನ್ ಬುಕ್ಕಿಂಗ್ ಮಾಡಿದ್ದು, ಕುಟುಂಬ ಸಮೇತ ಚಿತ್ರ ನೋಡಲು ಅವಕಾಶ ಕೊಡಿ ಅಂತ ರಜೆಪತ್ರ ಬರೆದಿದ್ದಾರೆ. ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರಗದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 7, 2019, 12:00 AM IST