Asianet Suvarna News Asianet Suvarna News

ಎನ್‌ಟಿಆರ್‌ ಅಭಿನಯದ 'ಜೈ ಲವ ಕುಶ ' ಚಿತ್ರದಲ್ಲಿ ನಟಿಸಲು ದುನಿಯಾ ವಿಜಿ ನಕಾರ

ದುನಿಯಾ ವಿಜಿ ಟಾಲಿವುಡ್‌ ನಟ ಎನ್‌ಟಿಆರ್‌ ಅಭಿನಯದ 'ಜೈ ಲವ ಕುಶ ' ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ ಇದೀಗ ಆ ಚಿತ್ರದಲ್ಲಿ ಅಭಿನಯಿಸದಿರಲು ದುನಿಯಾ ವಿಜಿ ನಿರ್ಧರಿಸಿದ್ದಾರಂತೆ.

Duniya Viji Refuse to act in NTR Casted Jai Lavakusha Cinema
  • Facebook
  • Twitter
  • Whatsapp

ಬೆಂಗಳೂರು (ಮೇ.20): ದುನಿಯಾ ವಿಜಿ ಟಾಲಿವುಡ್‌ ನಟ ಎನ್‌ಟಿಆರ್‌ ಅಭಿನಯದ 'ಜೈ ಲವ ಕುಶ ' ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ ಇದೀಗ ಆ ಚಿತ್ರದಲ್ಲಿ ಅಭಿನಯಿಸದಿರಲು ದುನಿಯಾ ವಿಜಿ ನಿರ್ಧರಿಸಿದ್ದಾರಂತೆ.

ಮಾಸ್ತಿಗುಡಿ ಚಿತ್ರದಲ್ಲಿನ ದುನಿಯಾ ವಿಜಿ ಗೆಟಪ್ ನೋಡಿ 'ಜೈ ಲವ ಕುಶ' ತಂಡ ಆ ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಿತ್ತು. ವಿಜಯ್ ಅದಕ್ಕೆ ಒಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದೀಗ ವಿಜಯ್‌ ಆ ಸಿನಿಮಾದಲ್ಲಿ ಆ್ಯಕ್ಟ್‌ ಮಾಡದಿರಲು ನಿರ್ಧರಿಸಿದ್ದಾರಂತೆ. ಈ ವಿಷಯವನ್ನು ಜ್ಯೂನಿಯರ್‌ ಎನ್‌ಟಿಆರ್‌ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರಂತೆ. ಮಾಸ್ತಿಗುಡಿ' ಸಿನಿಮಾ ರಿಲೀಸ್‌ ವೇಳೆ 'ಜೈ ಲವ ಕುಶ'  ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ವಿಜಿಗೆ ಸೂಚಿಸಲಾಗಿತ್ತು. ತಮ್ಮ ಚಿತ್ರದ ರಿಲೀಸ್‌ ವರ್ಕ್‌ನಲ್ಲಿ ಬ್ಯುಸಿಯಾಗಿದ್ದ ವಿಜಿ, 'ಜೈ ಲವ ಕುಶ' ಚಿತ್ರವನ್ನು ಕೈ ಬಿಡುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

 

Follow Us:
Download App:
  • android
  • ios