ಚರಂಡಿಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿರುವ ಸುದ್ದಿ ಓದಿದ ಮಿಥುನ್, ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಇದಕ್ಕೆ ಪತ್ನಿ ಯೋಗಿತಾ ಸಹ ಮನಸಾರೆ ಒಪ್ಪಿದರು. ಮುದ್ದಾದ ಹೆಣ್ಣು ಮಗುವನ್ನು ದತ್ತು ಪಡೆದ ನಟ, ಹೆತ್ತ ಮಗುವಿನಂತೆಯೇ ಸಾಕಿದರು.

ಮುಂಬೈ[ಮೇ.05]: ಮಕ್ಕಳೊಂದಿಗೆ ವಿಶೇಷ ಬಾಂಧವ್ಯವುಳ್ಳ ಅನೇಕ ಬಾಲಿವುಡ್ ನಟರು ಮಕ್ಕಳನ್ನು ದತ್ತು ಪಡೆಯುವುದು ಕಾಮನ್. ಬಾಡಿಗೆ ತಾಯಿ ಮೂಲಕ ಕೆಲವು ನಟರು ಅವಿವಾಹಿತರಾದರೂ ಮಕ್ಕಳನ್ನು ಪಡೆದರೆ, ಮತ್ತೆ ಕೆಲವರು ದತ್ತು ಪಡೆದಿದ್ದಾರೆ.

ಕರಣ್ ಜೋಹರ್, ತುಷಾರ್ ಕಪೂರ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಸಹ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದವರು. ಆದರೆ, ಸನ್ನಿ ಲಿಯೋನ್, ಸುಷ್ಮಿತಾ ಸೇನ್ ಸೇರಿ ಹಲವಾರು ಬಾಲಿವುಡ್ ಹಾಗೂ ಹಾಲಿವುಡ್ ನಟರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ, 70ರ ದಶಕದ ಡ್ಯಾನ್ಸ್ ಕಿಂಗ್ ಮಿಥುನ್ ಚಕ್ರವರ್ತಿ ನಡೆ ಮಾತ್ರ ಎಲ್ಲರಿಗಿಂತ ವಿಭಿನ್ನವೆನಿಸುತ್ತದೆ. 

ಚರಂಡಿಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿರುವ ಸುದ್ದಿ ಓದಿದ ಮಿಥುನ್, ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಇದಕ್ಕೆ ಪತ್ನಿ ಯೋಗಿತಾ ಸಹ ಮನಸಾರೆ ಒಪ್ಪಿದರು. ಮುದ್ದಾದ ಹೆಣ್ಣು ಮಗುವನ್ನು ದತ್ತು ಪಡೆದ ನಟ, ಹೆತ್ತ ಮಗುವಿನಂತೆಯೇ ಸಾಕಿದರು.

ಇದೀಗ ಬೆಳೆದ ಮಗಳು, ಎಲ್ಲ ನಟ ಮಕ್ಕಳಂತೆ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧಳಾಗುತ್ತಿದ್ದಾಳೆ. ಈಕೆ ಬೇರೆ ಯಾರೂ ಇಲ್ಲ, ದಿಶಾನಿ ಚಕ್ರವರ್ತಿ. 

View post on Instagram
View post on Instagram
View post on Instagram