ಕನ್ನಡ, ತೆಲುಗು, ತಮಿಳು- ಮೂರು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರದಲ್ಲೊಂದು ವಿಶೇಷ ಆಂಜನೇಯ ಭಜನೆ.

ಒಂದು ಹಾಡು. ಆ ಹಾಡಿನಲ್ಲಿ ಜೊತೆಯಾಗಲಿರುವ ಮಾವ-ಅಳಿಯ. ಅವರಿಗೆ ಸಾಥ್ ನೀಡುತ್ತಿರುವ ದರ್ಶನ್! ತನ್ನ ಮಗಳು ಸೌಂದರ್ಯಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಅರ್ಜುನ್ ಸರ್ಜಾ ಸಾಹಸ, ‘ಪ್ರೇಮಬರಹ’ ಚಿತ್ರದ ಕತೆ ಇದು. ಕನ್ನಡ, ತೆಲುಗು, ತಮಿಳು- ಮೂರು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರದಲ್ಲೊಂದು ವಿಶೇಷ ಆಂಜನೇಯ ಭಜನೆ.

ಅರ್ಜುನ್ ಸರ್ಜಾ, ಧ್ರುವ ಸರ್ಜಾ ಇಬ್ಬರಿಗೂ ಆಂಜನೇಯ ಪರಮಪ್ರಿಯ. ಹೀಗಾಗಿ ಈ ಹಾಡಿನಲ್ಲೂ ಹನುಮಾನ್ ಚಾಲೀಸ! ಅದಕ್ಕೆ ಜೊತೆಯಾಗಲು ಅರ್ಜುನ್, ಧ್ರುವ, ಚಿರಂಜೀವಿ ಮತ್ತು ದರ್ಶನ್. ಅಲ್ಲಿಗೆ ಹಾಡಿಗೆ ಬಂತು ಸೂಪರ್ ಪವರ್! ಈ ಹಾಡಿನ ಚಿತ್ರೀಕರಣ ನಾಲ್ಕು ದಿನಗಳ ಕಾಲ ನಡೆಯುತ್ತದೆ. ನೂರು ಸಹ ಕಲಾವಿದರು ಜೊತೆಗಿರುತ್ತಾರೆ. ನೃತ್ಯ ನಿರ್ದೇಶಕ ಮೋಹನ್ ಸಾರಥ್ಯದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಈ ಹಾಡಿನೊಂದಿಗೆ ಪ್ರೇಮಬರಹದ ಚಿತ್ರೀಕರಣ ಕೂಡ ಮುಕ್ತಾಯಗೊಳ್ಳುತ್ತಿದೆ.