ಅಂಬಿ ಮತ್ತು ಅಪ್ಪು ಅಪ್ಪಿಕೊಂಡ ಭಂಗಿಯ ಕಟೌಟ್, 81 ಅಡಿಯ ಈ ಕಟೌಟನ್ನು ಸಿನಿಮಾದವರೇ ಮಾಡಿಸಿದ್ದಾರೆ

ಬೆಂಗಳೂರು(ಸೆ.29): ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಸಿನಿಮಾ ನಾಳೆ ವಿಶ್ವದಾದ್ಯಂತ ರಿಲೀಸಾಗುತ್ತಿದೆ. ಬೆಳ್ಳಿತೆರೆಯ ಮೇಲೆ ದೊಡ್ಮನೆ ಜಾತ್ರೆ ನೋಡುವುದಕ್ಕೆ ಅಪ್ಪು ಅಭಿಮಾನಿಗಳು ಕಾಯುತ್ತಿದ್ದಾರೆ. ರಿಲೀಸಾಗುತ್ತಿರುವ ಮುಖ್ಯ ಚಿತ್ರಮಂದಿರಗಳಲ್ಲಿ ವಿಭಿನ್ನ ಕಟೌಟ್ ಗಳು ರಾರಾಜಿಸುತ್ತಿವೆ.

ಅಂಬಿ ಮತ್ತು ಅಪ್ಪು ಅಪ್ಪಿಕೊಂಡ ಭಂಗಿಯ ಕಟೌಟ್, 81 ಅಡಿಯ ಈ ಕಟೌಟನ್ನು ಸಿನಿಮಾದವರೇ ಮಾಡಿಸಿದ್ದಾರೆ.ಆನಂದ್ ಆರ್ಟ್ಸ್ ನ ಆನಂದ್ ಬರೆದಿರುವ ಈ ಕಟೌಟ್ ಆಕರ್ಷಕವಾಗಿದೆ. ಬೆಂಗಳೂರಿನ ಪ್ರಮುಖ ಥಿಯೇಟರ್ ನರ್ತಕಿಯಲ್ಲಿ ನಿಲ್ಲಿಸಲಾಗಿದೆ.