ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ತೆಲುಗಿಗೆ ರಿಮೇಕ್ ಆಗ್ತಿದೆ. ಈಗಾಗ್ಲೇ ತೆಲುಗಿನ ಬಿಗ್ ನಿರ್ಮಾಪಕರೊಬ್ಬರು ಸಿನಿಮಾದ ರಿಮೇಕ್ ರೈಟ್ಸ್‌'ಗಳನ್ನು ತೆಗೆದುಕೊಳ್ಳಲು ಮುಂದೆ ಬಂದಿದ್ದಾರಂತೆ.

ಸದ್ಯ ಕಥೆ ಕೇಳಿದ್ದು ಸಖತ್ ಥ್ರಿಲ್ ಆಗಿದ್ದಾರೆ. ಈಗಾಗ್ಲೇ ಕಾಸ್ಟಿಂಗ್ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದು, ದೊಡ್ಮನೆ ಹುಡುಗನಾಗಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಕಾಣಿಸಿಕೊಳ್ತಾರೆ ಎನ್ನಲಾಗುತ್ತಿದೆ. ಆದ್ರೆ ಸಿನಿಮಾ ರಿಲೀಸ್ ಆದ ನಂತರವೇ ಎಲ್ಲಾ ಪ್ರೊಸೆಸ್ ಆಗಲಿದೆ.

ಒಟ್ಟಿನಲ್ಲಿ ದೊಡ್ಮನೆ ಹುಡುಗ ತೆಲುಗು ನಾಡಿಗೆ ಹೋಗುತ್ತಿದ್ದಾನೆ ಎನ್ನುತ್ತಿದ್ದಂತೆಯೇ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.