ಚಾಂಪಿಯನ್ ಸಾಂಗ್ ಅನ್ನು ಬಹುತೇಕ ನೀವೆಲ್ಲ ಕೇಳಿ ಆನಂದಿಸಿರುತ್ತೀರಾ. 2016 ರ ಟಿ-20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡ ಡ್ವೇನ್ ಬ್ರಾವೋ ರಚಿಸಿದ್ದ ಚಾಂಪಿಯನ್ ಸಾಂಗ್'ಗೆ ನೃತ್ಯ ಮಾಡಿ ಸಾಕಷ್ಟು ಗಮನ ಸೆಳೆದಿತ್ತು. ಅದಾದ ನಂತರ ಚಾಂಪಿಯನ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದು ಈಗ ಹಳೆಯ ವಿಶೇಷ.

ಈಗ ಚಾಂಪಿಯನ್ ಸಾಂಗ್'ಗೆ ಹೊಸ ಮೆರುಗು ಸಿಕ್ಕಿದೆ. ಕೆರಿಬಿಯನ್ ಕ್ರಿಕೆಟಿಗರಾದ ಡ್ವೇನ್ ಬ್ರಾವೋ ಹಾಗೂ ಕ್ರಿಸ್ ಗೇಲ್ ಸ್ಕೋರ್ ಕಾಂಡೋಮ್'ಗಾಗಿ ಚಾಂಪಿಯನ್ ಸಾಂಗ್'ನ್ನು ರಿಮೇಕ್ ಮಾಡಿದ್ದಾರೆ. ಹೊಸ ರಿಮೇಕ್ ಸಾಂಗ್ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ... ನೀವೂ ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ