ಮೆಜಸ್ಟಿಕ್ ಖ್ಯಾತಿಯ ನಿರ್ದೇಶಕ ಪಿ.ಎನ್. ಸತ್ಯ ನಿಧನ

Director PN Satya Passas Away
Highlights

ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಬಸವೇಶ್ವರ ನಗರದಲ್ಲಿರುವ ಅವರ ಸಹೋದರಿಯ  ನಿವಾಸಕ್ಕೆ ಬಂದಿದ್ದರು. ಆದರೆ ಶನಿವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ  ನಿಧನರಾಗಿದಾರೆಂದು
ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಬೆಂಗಳೂರು(ಮೇ.06): ನಟ ದರ್ಶನ್'ಗೆ  ಖ್ಯಾತಿ ತಂದುಕೊಟ್ಟ ಮೆಜೆಸ್ಟಿಕ್  ಚಿತ್ರದ ಖ್ಯಾತಿಯ ಕನ್ನಡದ ಹೆಸರಾಂತ  ನಿರ್ದೇಶಕ ಪಿ.ಎನ್. ಸತ್ಯ ಶನಿವಾರ ಸಂಜೆ ಅನಾರೋಗ್ಯದಿಂ ದ ವಿಧಿವಶರಾದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಹಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಬಸವೇಶ್ವರ ನಗರದಲ್ಲಿರುವ ಅವರ ಸಹೋದರಿಯ  ನಿವಾಸಕ್ಕೆ ಬಂದಿದ್ದರು. ಆದರೆ ಶನಿವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ  ನಿಧನರಾಗಿದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 
2002ರಲ್ಲಿ ದರ್ಶನ್ ಅಅಭಿನಯದ ಮೆಜಸ್ಟಿಕ್  ಸಿನಿಮಾದೊಂದಿಗೆ ಚಿತ್ರ  ನಿರ್ದೇಶನಕ್ಕೆ ಬಂದ ಸತ್ಯ ನಟನಾಗಿಯೂ ಕಾಣಿಸಿಕೊಂಡರು. ಧ್ರುವ,  ತಿರುಪತಿ, ಅರಸು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದರು.

loader