"ನಿಮಗೆಲ್ಲಾ ನನ್ನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅದೇನೆ ಇರಲಿ ನನ್ನೆಲ್ಲಾ ಸಮಸ್ಯೆಗಳಿಗೆ ಕಾವ್ಯ ಕಾರಣಳಲ್ಲ. ನನ್ನ ಜೊತೆ ಸಂಬಂಧ ಕಲ್ಪಿಸಿ ಬಲಿಪಶುವಾದ ಹುಡುಗಿ ಜೊತೆ ಮದುವೆಯಾಗಿದ್ದೇನೆ" ಎಂದು ಮಲಯಾಳಂ ನಟ ದಿಲೀಪ್ ಮನದಾಳದ ಮಾತುಗಳನ್ನಾಡಿದ್ದಾರೆ.

ನವದೆಹಲಿ (ನ.26): "ನಿಮಗೆಲ್ಲಾ ನನ್ನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅದೇನೆ ಇರಲಿ ನನ್ನೆಲ್ಲಾ ಸಮಸ್ಯೆಗಳಿಗೆ ಕಾವ್ಯ ಕಾರಣಳಲ್ಲ. ನನ್ನ ಜೊತೆ ಸಂಬಂಧ ಕಲ್ಪಿಸಿ ಬಲಿಪಶುವಾದ ಹುಡುಗಿ ಜೊತೆ ಮದುವೆಯಾಗಿದ್ದೇನೆ" ಎಂದು ಮಲಯಾಳಂ ನಟ ದಿಲೀಪ್ ಮನದಾಳದ ಮಾತುಗಳನ್ನಾಡಿದ್ದಾರೆ.

ಮಲಯಾಳಂ ಖ್ಯಾತ ನಟ ದಿಲೀಪ್ ಹಾಗೂ ನಟಿ ಕಾವ್ಯಾ ಮಾಧವನ್ ಇಂದು ಸಪ್ತಪದಿ ತುಳಿದಿದ್ದಾರೆ. ಕಳೆದ ಒಂದು ದಶಕಗಳಿಂದ ಅವರಿಬ್ಬರ ಬಗ್ಗೆ ಗಾಳಿಸುದ್ಧಿ ಹರಿದಾಡುತ್ತಿತ್ತು. ಇದೀಗ ದಿಲೀಪ್ ಕಾವ್ಯಾರನ್ನು ಮದುವೆಯಾಗುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದಿಲೀಪ್ ಅವರಿಗೆ ನಟಿ ಮಂಜು ವಾರಿಯರ್ ಜೊತೆ ಈಗಾಗಲೇ ಮದುವೆಯಾಗಿತ್ತು. ಅವರಿಗೆ ವಿಚ್ಚೇದನ ನೀಡಿ ಕಾವ್ಯಾರನ್ನು ವರಿಸಿದ್ದಾರೆ.