ಟೈಗರ್ ಶ್ರಾಫ್, ದಿಶಾ ಪಟಾನಿ ಮಧ್ಯೆ ಮಾತಿಲ್ಲ ಕತೆಯಿಲ್ಲ; ಏನ್ ನಡೆದಿದೆ ಇಬ್ಬರ ನಡುವೆ?

Difference of opinion between Disha Patani and Tiger Shroff
Highlights

ಟೈಗರ್ ಶ್ರಾಫ್ ಆ್ಯಂಡ್ ದಿಶಾ ಪಟಾನಿ ಒಂದು ಕಾಲದ ಪ್ರೇಮಿಗಳು ಎಂದು ಬಾಲಿವುಡ್ ಮಂದಿಗೆ, ಅಭಿಮಾನಿಗಳಿಗೆ ತುಂಬಾ ಚೆನ್ನಾಗಿಯೇ ಗೊತ್ತು. ಆದರೆ ಅದ್ಯಾವ  ವಿಷಗಳಿಗೆ ಬಂತೋ ನಾನೊಂದು ತೀರ ನೀನೊಂದು ತೀರ ಎನ್ನುವಂತಾಯಿತು ಈ ಜೋಡಿಯ ಕತೆ. ಲವ್ವಿ ಡವ್ವಿ ಎಂದು ಹಾಡಿ ಬೇರೆ ಬೇರೆಯಾಗುವುದು ಕಾಮನ್  ಬಿಡಪ್ಪಾ ಎಂದುಕೊಳ್ಳುವವರು ಅದೇ ಹಳೆಯ ಜೋಡಿ ಎಲ್ಲಾದರೂ ಒಟ್ಟಿಗೆ ಕಾಣಿಸಿಕೊಂಡರಂತೂ ಕಣ್ಣು ರೆಪ್ಪೆಯನ್ನಾಡಿಸದೇ ನೋಡುತ್ತಲೇ ಇರುತ್ತಾರೆ. 

ಟೈಗರ್ ಶ್ರಾಫ್ ಆ್ಯಂಡ್ ದಿಶಾ ಪಟಾನಿ ಒಂದು ಕಾಲದ ಪ್ರೇಮಿಗಳು ಎಂದು ಬಾಲಿವುಡ್ ಮಂದಿಗೆ, ಅಭಿಮಾನಿಗಳಿಗೆ ತುಂಬಾ ಚೆನ್ನಾಗಿಯೇ ಗೊತ್ತು. ಆದರೆ ಅದ್ಯಾವ  ವಿಷ ಗಳಿಗೆ ಬಂತೋ ನಾನೊಂದು ತೀರ ನೀನೊಂದು ತೀರ ಎನ್ನುವಂತಾಯಿತು ಈ ಜೋಡಿಯ ಕತೆ. ಲವ್ವಿ ಡವ್ವಿ ಎಂದು ಹಾಡಿ ಬೇರೆ ಬೇರೆಯಾಗುವುದು ಕಾಮನ್  ಬಿಡಪ್ಪಾ ಎಂದುಕೊಳ್ಳುವವರು ಅದೇ ಹಳೆಯ ಜೋಡಿ ಎಲ್ಲಾದರೂ ಒಟ್ಟಿಗೆ ಕಾಣಿಸಿಕೊಂಡರಂತೂ ಕಣ್ಣು ರೆಪ್ಪೆಯನ್ನಾಡಿಸದೇ ನೋಡುತ್ತಲೇ ಇರುತ್ತಾರೆ.

ಅವರಿಬ್ಬರೂ  ಹೇಗೆ ಮಾತಾಡುತ್ತಾರೆ, ಹೇಗಿರಬಹುದು ಅವರ ಮುಖಾಮುಖಿ ಎಂದು. ಎಷ್ಟಾದರೂ ಅವರು ಹಳೆ ಪ್ರಣಯಿಗಳಲ್ಲವೇ? ಅದೇ ದೃಶ್ಯ ಕಂಡುಬಂದದ್ದು ಟೈಗರ್ ಶ್ರಾಫ್ ಮತ್ತು ದಿಶಾ ಒಂದೇ ಕಡೆ ಕಾಣಿಸಿಕೊಂಡಾಗ. ಅಲ್ಲಿ ಸೇರಿದ್ದವರು ಇಬ್ಬರ ಮುಖಾಮುಖಿಯನ್ನು ಕಾತರದಿಂದ ಎದುರು ನೋಡುತ್ತಿದ್ದರು. ಆದರೆ ಇದು ಸಾಧ್ಯವಾಗದೇ ಇದ್ದದ್ದು ಮಾತ್ರ ಕೊಂಚ ಬೇಸರ ಮೂಡಿಸಿರಲಿಕ್ಕೂ ಸಾಕು. \

ಅಷ್ಟಕ್ಕೂ ಈ ಜೋಡಿ ಬೇಕು ಬೇಕು ಎಂದೇ ಮುಖಾಮುಖಿಯಾಗಿಲ್ಲ. ಒಬ್ಬರು ಒಂದು ಬಾಗಿಲಿನಿಂದ ಎಂಟರ್ ಆದರೆ ಮತ್ತೊಬ್ಬರು ಇನ್ನೊಂದು ಬಾಗಿಲಿನಿಂದ ಎಕ್ಸಿಟ್ ಆಗಿದ್ದಾರೆ. ಇದರಿಂದ ಶ್ರಾಫ್ ಮತ್ತು ದಿಶಾ ನಡುವಲ್ಲಿ ಈಗ
ಏನೇನು ಕೆಮಿಸ್ಟ್ರಿ ಉಳಿದಿಲ್ಲ ಎನ್ನುವುದು ಬಹುತೇಕ ಪಕ್ಕಾ ಆದಂತಾಗಿದೆ.  

loader