ಹೌದು, ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಮೂರು ಅದ್ದೂರಿ ಸೆಟ್‌ಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದ ಚಿತ್ರತಂಡಕ್ಕೆ ಈಗ ಎರಡು ಸೆಟ್‌ಗಳು ರೆಡಿಯಾಗಿ ನಿಂತಿವೆ. ಈ ಪೈಕಿ ತೆಲುಗಿನಲ್ಲಿ ‘ಬಾಹುಬಲಿ’ ಚಿತ್ರದ ಸೆಟ್ ಹಾಗೂ ಬಾಲಿವುಡ್‌ನ ‘ಬಾಜಿರಾವ್ ಮಸ್ತಾನಿ’ ಚಿತ್ರದ ಸೆಟ್. ರಾಜ್‌ಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಕನಸಿನ ಈ ಸೆಟ್‌ಗಳಲ್ಲೇ ಚಿತ್ರದ ಬಹು ಮುಖ್ಯವಾದ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಸೆಟ್‌ಗಳು ಸಿಕ್ಕಾಪಟ್ಟೆ ಅದ್ದೂರಿಯಾಗಿವೆ. ಈಗಾಗಲೇ ಮುಂಬಾಯಿನಲ್ಲಿ ನಿರ್ಮಿಸಿರುವ ‘ಬಾಜಿರಾವ್ ಮಸ್ತಾನಿ’ ಹಾಗೂ ಹೈದರಾಬಾದ್‌ನ ರಾಮೋಜಿ ಫಿಲಮ್ ಸಿಟಿಯಲ್ಲಿ ಹಾಕಿರುವ ‘ಬಾಹುಬಲಿ’ ಸೆಟ್‌ಗಳಿಗೆ ಚಿತ್ರತಂಡ ಭೇಟಿ ಕೊಟ್ಟಿದೆ. ಚಿತ್ರದ ಕತೆಗೆ ಸಂಬಂಧಿ ಸಿದ್ದಂತೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅದೇ ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಜನೆ ರೂಪಿಸಿದೆ. ಇನ್ನೂ ಇದರ ಜತೆಗೆ ರಾಜಸ್ಥಾನದಲ್ಲೂ ಒಂದು ಸೆಟ್ ನಿರ್ಮಿಸುವ ಯೋಚನೆ ನಿರ್ಮಾಪಕರದ್ದು. 

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ Unseen ಫೋಟೋಸ್!

ರಾಜಕೀಯ, ಗಡ್ಡ ಅಡ್ಡ ಬಂತು
ಹಾಗೆ ನೋಡಿದರೆ ಇಷ್ಟೊತ್ತಿಗೆ ‘ಗಂಡುಗಲಿ ಮದಕರಿ ನಾಯಕ’ ಶೂಟಿಂಗ್ ಮೈದಾನಕ್ಕೆ ಹೋಗಬೇಕಿತ್ತು. ಬರವಣಿಗೆ ಕೆಲಸ ಮುಗಿದೆ. ಇನ್ನೂ ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕರಾಗಿರುವ ಕಾರಣ ಅವರಿಗೆ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ತಂತ್ರಜ್ಞರು ಹಾಗೂ ಕಲಾವಿದರ ಪರಿಚಯ ಇದೆ. ಬಹು ಬೇಗನೇ ತಂಡ ಕಟ್ಟುವ ಸಾಧ್ಯತೆಗಳಿದ್ದವು. ಆದರೆ, ಇದಕ್ಕಿದ್ದಂತೆ ಚುನಾವಣೆ ಬಂತು. ಸುಮಲತಾ ಅಂಬರೀಶ್ ಚುನಾವಣೆಗೆ
ನಿಂತುಕೊಂಡರು. ಸಹಜವಾಗಿ ರಾಕ್‌ಲೈನ್ ವೆಂಕಟೇಶ್ ಅವರ ಬೆನ್ನಿಗೆ ನಿಂತರು. ಇತ್ತ ಚಿತ್ರದ ನಾಯಕ ದರ್ಶನ್ ಕೂಡ ಸುಮಲತಾ ಪರವಾಗಿ ಚುನಾವಣೆಯ ಪ್ರಚಾರಕ್ಕೆ ಇಳಿದರು. ಅಲ್ಲದೆ ‘ರಾಬರ್ಟ್’ ಚಿತ್ರಕ್ಕಾಗಿ ದರ್ಶನ್ ಗಡ್ಡ ಬೇರೆ ಬಿಟ್ಟಿದ್ದಾರೆ. ಈ ಗಡ್ಡ ಮತ್ತು ಚುನಾವಣೆಯಿಂದ ಒಂದಿಷ್ಟು ದಿನಗಳ ಕಾಲ ‘ಗಂಡುಗಲಿ ಮದಕರಿ ನಾಯಕ’ನಿಗೆ ಶೂಟಿಂಗ್ ಭಾಗ್ಯ ದಕ್ಕುತ್ತಿಲ್ಲ. ಒಂದು ವೇಳೆ ‘ರಾಬರ್ಟ್’ ಚಿತ್ರಕ್ಕೆ ಅಂದುಕೊಂಡಂತೆ ಇದೇ ತಿಂಗಳು ಮುಹೂರ್ತ ನಡೆದರೆ ಈ ಸಿನಿಮಾ ಮುಗಿದ ಮೇಲೆಯೇ ಮದಕರಿ ನಾಯಕನ ಚಿತ್ರ ಸೆಟ್ಟೇರುವ ಸಾಧ್ಯಗಳಿವೆ. ಯಾಕೆಂದರೆ ಇಲ್ಲಿ ನಾಯಕನ ಗೆಟಪ್ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಗಡ್ಡಕ್ಕೆ ಬದಲಾಗಿ ಮೀಸೆ ಬೆಳೆಸಬೇಕಿದೆ. ಔಟ್‌ಲುಕ್ ಬದಲಾಯಿಸಿಕೊಳ್ಳ
ಬೇಕಿದೆ. ಅತ್ತ ಚುನಾವಣೆಯ ಬಿಸಿ ತಣ್ಣಗಾಗಿ ಫಲಿತಾಂಶ ಬರಬೇಕಿದೆ. ಈ ಎಲ್ಲ ಕಾರಣಗಳಿಗಾಗಿ ಮದಕರಿ ನಾಯಕನ ಶೂಟಿಂಗ್ ತಡವಾಗಲಿದೆಯಂತೆ.