ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ನಟಿಸಿದ್ದರೆ ದರ್ಶನ್'ಅವರ 50ನೇ ಸಿನಿಮಾವಾಗುತ್ತಿತ್ತು.  

ಸ್ಯಾಂಡಲ್'ವುಡ್'ನ ಭಾರಿ ಬಜೆಟ್'ನ ಚಿತ್ರವೆಂದೆ ಪರಿಗಣಿಸಿರುವ ಕುರುಕ್ಷೇತ್ರ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವು ಈ ಪೌರಾಣಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕೆಲ ವರದಿಗಳ ಪ್ರಕಾರ ಸಿನಿಮಾದ ತಾರಾಗಣವನ್ನು ಅಂತಿಮಗೊಳಿಸದ ಕಾರಣದಿಂದ ಟೀಮ್ ಬಗ್ಗೆ ಬೇಸರಗೊಂಡಿದ್ದು, ಸಿನಿಮಾದಿಂದ ಹೊರಗುಳಿಯಲು ಕಾರಣ ಎಂದು ತಿಳಿದುಬಂದಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ನಟಿಸಿದ್ದರೆ ದರ್ಶನ್'ಅವರ 50ನೇ ಸಿನಿಮಾವಾಗುತ್ತಿತ್ತು.

ದರ್ಶನ್ ಈ ಸಿನಿಮಾದಲ್ಲಿ ನಟಿಸುವ ಸಲುವಾಗಿಯೇ ಫೋಟೊ ಶೂಟ್'ನಲ್ಲಿಯೂ ಭಾಗವಹಿಸಿದ್ದರು. ಪ್ರಸ್ತುತ ದರ್ಶನ್ ಅವರು ತಾರಕ್ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಕೂಡ ನಡೆಯುತ್ತಿದೆ. ಇದಕ್ಲಿಂತ ಮೊದಲು ರೆಬಲ್ ಸ್ಟಾರ್ ಅಂಬರೀಶ್ ಕೂಡ ತಾವು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಿಸಿದ್ದರು. ಈಗ ದರ್ಶನ್ ಕೂಡ ಹೊರಗುಳಿದಿದ್ದಾರೆ.