ಇಂದು ಮಂಡ್ಯದ ಗಂಡು ಅಂಬರೀಶ್ 67 ನೇ ಹುಟ್ಟುಹಬ್ಬ | ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ |
ಮಂಡ್ಯದ ಗಂಡು ದಿವಂಗತ ಅಂಬರೀಶ್ 67 ನೇ ಹುಟ್ಟುಹಬ್ಬ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಸೇರಿದಂತೆ ನೂರಾರು ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.
ಸಿನಿ ತಾರೆಯರು ಅಂಬಿ ಹುಟ್ಟುಹಬ್ಬದಂದು ಅವರನ್ನು ನೆನೆಸಿಕೊಂಡಿದ್ದಾರೆ. ಅಂಬಿಗೆ ಅತ್ಯಂತ ಆಪ್ತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬಿಯನ್ನು ನೆನೆಸಿಕೊಂಡಿದ್ದಾರೆ.
ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ.
