ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಜಿಯಾಗಿದ್ದ ದರ್ಶನ್ ಹೋಟಲ್' ಗೆ ಹೋದಮೇಲೆ ಕನ್ನಡ ಚಾನೆಲ್ ಗಳನ್ನೇ ನೋಡೋದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ನಾಡಿನಲ್ಲಿ ಕನ್ನಡ ಪ್ರೇಮ ಮರೆದಿದ್ದಾರೆ. ಪಕ್ಕದ ರಾಜ್ಯದಲ್ಲಿ ಹೋಗಿ ಕನ್ನಡಕ್ಕಾಗಿಯೇ ಜಗಳವಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಗಳವನ್ನ ಎಲ್ಲರೂ ಸಮರ್ಥಿಸಿಕೊಳ್ಳಲೇಬೇಕು. ನ್ಯಾಯವಾಗಿಯೇ ನಡೆದ ಆ ಜಗಳದಲ್ಲಿ ದರ್ಶನ್ ಸೋತಿಲ್ಲ. ಗೆಲುವು ಕಂಡಿದ್ದಾರೆ.
ದರ್ಶನ್ ಜಗಳ ಕಾದಿದ್ದು ನಿಜ. ಅದು ಕನ್ನಡಕ್ಕಾಗಿಯೇ ಅನ್ನೋದು ಅಷ್ಟೇ ಸತ್ಯ. ಕುರುಕ್ಷೇತ್ರ ಸೆಟ್'ನಲ್ಲಿ ಕಾಲಿಟ್ಟಾಗ ಮೊದಲು ಚಿತ್ರ ತಂಡದಿಂದ ಕೇಳಿ ಬಂದ ವಿಷಯವೇ ಇದು. ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಜಿಯಾಗಿದ್ದ ದರ್ಶನ್ ಹೋಟಲ್' ಗೆ ಹೋದಮೇಲೆ ಕನ್ನಡ ಚಾನೆಲ್ ಗಳನ್ನೇ ನೋಡೋದು. ಆ ಕಾರಣಕ್ಕಾಗಿ ಅಲ್ಲಿ ಸಿಗದಿದ್ದಾಗ ಜಗಳ ಕಾದಿದ್ದಾರೆ. ನಮ್ಮಲ್ಲಿ ಬನ್ನಿ, ಎಲ್ಲ ಭಾಷೆಯ ಚಾನೆಲ್ ಇರ್ತವೆ. ಇಲ್ಲಿ ಯಾಕಿರೋದಿಲ್ಲ. ಬೇಗ ಹಾಕಿಸಿ ಅಂತಲೂ ಹೇಳಿದ್ದಾರೆ. ಎರಡು ದಿನದ ನಂತರ ದರ್ಶನ್ ಇದ್ದ ಹೋಟೆಲ್'ನಲ್ಲಿ ಕನ್ನಡ ಎಂಟರಟೈನಮೆಂಟ್ ಚಾನಲ್'ಗಳು ಬಂದಿವೆ.
ಅದನ್ನ ನೋಡಿ ಎಂಜಾಯ್ ಮಾಡಿದ್ದಾರೆ ಚಾಲೆಂಜಿಗ್ ಸ್ಟಾರ್. ಉಳಿದಂತೆ ಈಗ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಜನವರಿ 05 ಕ್ಕೆ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಪ್ಯಾಕ್'ಅಪ್ ಆಗಿದೆ. ಮಾರ್ಚ್ 09 ಕ್ಕೆ ರಿಲೀಸ್'ಗೂ ಈಗ ಚಿತ್ರ ತಂಡ ಸಜ್ಜಾಗುತ್ತಿದೆ.
