ಮೈಸೂರಿನಲ್ಲಿ ಕಾರು ಅಪಘಾತಕ್ಕೀಡಾಗಿ ದಾಸ ದರ್ಶನ್ ಇದೀಗ ತಾನೇ ಸುಧಾರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಮೃತಪಟ್ಟ ಸುದ್ದಿ ತಿಳಿದ ದರ್ಶನ್, ಸಾವಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಅಷ್ಟೇ ಅಲ್ಲ, ಗಾಡಿಯನ್ನು ದಯಮಾಡಿ ಅತೀ ಜಾಗರೂಕತೆಯಿಂದ ಚಲಾಯಿಸಿ ಎಂಬ ಸಂದೇಶವನ್ನೂ ನೀಡಿದ್ದಾರೆ. ಕೆಲವೊಮ್ಮೆ ದುರಾದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ದೂರದ ಪ್ರಯಾಣಕ್ಕೆ ದ್ವಿ ಚಕ್ರ ವಾಹನಗಳನ್ನು ನಿಯಂತ್ರಿಸಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ವಿದ್ಯುತ್ ಕಂಬಕ್ಕೆ ದರ್ಶನ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಕೈಗೆ ಏಟು ಬಿದ್ದಿದ್ದು, ವಿಶ್ರಾಂತಿಯಲ್ಲಿದ್ದಾರೆ. ಇವರೊಂದಿಗೆ ಪಯಣಿಸುತ್ತಿದ್ದ ಹಿರಿಯ ನಟ ದೇವರಾಜ್ ಹಾಗೂ ಪ್ರಜ್ವಲ್‌ಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.