ತಮಿಳಿನ ಸೂರ್ಯ ಅಭಿನಯದ ಸೂರ್ಯ ಅಭಿನಯದ ಸಿಂಗಂ -2 ಸಿನಿಮಾದಲ್ಲಿ ಅಭಿನಯಿಸಿದ್ದ ಡ್ಯಾನಿ ಈಗ ಬೆಳ್ಳಿ ತೆರೆಗೆ ಕಾಲಿಡಲಿದ್ದಾರೆ.

ಹಾಲಿವುಡ್ ನಟ ಡ್ಯಾನಿ ಸಪಾನಿ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ಹಾಲಿವುಡ್ ಚಿತ್ರಗಳು ಹಾಗೂ ತಮಿಳಿನ ಸೂರ್ಯ ಅಭಿನಯದ ಸೂರ್ಯ ಅಭಿನಯದ ಸಿಂಗಂ -2 ಸಿನಿಮಾದಲ್ಲಿ ಅಭಿನಯಿಸಿದ್ದ ಡ್ಯಾನಿ ಈಗ ಬೆಳ್ಳಿ ತೆರೆಗೆ ಕಾಲಿಡಲಿದ್ದಾರೆ.

ಉಗ್ರಂ ಮುರುಳಿ ನಟಿಸಿದ್ದ ರಥಾವರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರು ತಮ್ಮ ಹೊಸ ಚಿತ್ರ ತಾರಾಕಸುರ ಸಿನಿಮಾ ನಿರ್ದೇಶಿಸಲಿದ್ದು, ಈ ಚಿತ್ರದಲ್ಲಿ ಡ್ಯಾನಿ ಅಭಿನಯಿಸಲಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಯಾಗಿರುವ ನರಸಿಂಹುಲು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದುಅವರ ಪುತ್ರ ವೈಭವ್ ಅವರೆ ಈ ಚಿತ್ರದ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಇದರೊಂದಿಗೆ ಹಾಲಿವುಡ್ ನಟರೊಬ್ಬರು ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ.