ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್‌ ಮತ್ತು ಅವರನ್ನು ಆ ಹಂತಕ್ಕೆ ತರಲು ಅವರ ತಂದೆ ಮಹಾವೀರ್‌ ಫೋಗಟ್‌ ಪಟ್ಟಕಷ್ಟಗಳನ್ನೇ ಆಧರಿಸಿ ನಿರ್ಮಿಸಲಾದ ಅಮೀರ್‌ ಖಾನ್‌ ಅಭಿನಯದ ದಂಗಲ್‌ ಚಿತ್ರ, ಭಾರ ತೀಯ ಚಿತ್ರರಂಗದಲ್ಲೇ ಅಪೂರ್ವ ದಾಖಲೆ ಸೃಷ್ಟಿಸಿದೆ. 2016ರ ಡಿ.23 ರಂದು ಬಿಡುಗಡೆಯಾಗಿದ್ದ ದಂಗಲ್‌ ವಿಶ್ವದಾದ್ಯಂತ ಒಟ್ಟಾರೆ 2000 ಕೋಟಿ ರು. ಸಂಪಾದಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ನವದೆಹಲಿ(ಜೂ.28): ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್‌ ಮತ್ತು ಅವರನ್ನು ಆ ಹಂತಕ್ಕೆ ತರಲು ಅವರ ತಂದೆ ಮಹಾವೀರ್‌ ಫೋಗಟ್‌ ಪಟ್ಟಕಷ್ಟಗಳನ್ನೇ ಆಧರಿಸಿ ನಿರ್ಮಿಸಲಾದ ಅಮೀರ್‌ ಖಾನ್‌ ಅಭಿನಯದ ದಂಗಲ್‌ ಚಿತ್ರ, ಭಾರ ತೀಯ ಚಿತ್ರರಂಗದಲ್ಲೇ ಅಪೂರ್ವ ದಾಖಲೆ ಸೃಷ್ಟಿಸಿದೆ. 2016ರ ಡಿ.23 ರಂದು ಬಿಡುಗಡೆಯಾಗಿದ್ದ ದಂಗಲ್‌ ವಿಶ್ವದಾದ್ಯಂತ ಒಟ್ಟಾರೆ 2000 ಕೋಟಿ ರು. ಸಂಪಾದಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ದಂಗಲ್‌ ಚಿತ್ರ ಭಾರತದಲ್ಲಿ 675 ಕೋಟಿ ರು. ಸಂಪಾದಿಸಿತ್ತು. ಆದರೆ 53 ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆಯಾದ ಬಳಿಕ ಚಿತ್ರದ ಅದೃಷ್ಟಖುಲಾಯಿಸಿದ್ದು ಕೇವಲ 53 ದಿನಗಳಲ್ಲಿ ಚಿತ್ರ 1250 ಕೋಟಿ ರು.ಗೂ ಹೆಚ್ಚಿನ ಹಣ ಸಂಪಾದಿಸಿದೆ. ಇದರ ಜೊತೆಗೆ ವಿಶ್ವದ ಇತರೆ ಕೆಲ ದೇಶಗಳಲ್ಲಿನ ಆದಾಯವನ್ನು ಸೇರಿಸಿದರೆ ಇದೀಗ ಅದು 2000 ಕೋಟಿ ರು. ಗುರಿ ಮುಟ್ಟಿದೆ ಎಂದು ಫೋರ್ಬ್ಸ್ ವರದಿ ಪ್ರಕಟಿಸಿದೆ.

ದಾಖಲೆ ಮುರಿಯುತ್ತಾ ಬಾಹು ಬಲಿ 2: ಬಾಹುಬಲಿ 2 ವಿಶ್ವದಾದ್ಯಂತ 1725 ಕೋಟಿ ರು. ಸಂಪಾದಿಸಿದೆ. ಶೀಘ್ರವೇ ಈ ಚಿತ್ರವನ್ನು ಚೀನಾದಲ್ಲಿ ಬಿಡುಗಡೆಗೆ ಯೋಜಿಸಲಾಗಿದೆ. ಬಿಡುಗಡೆ ಬಳಿಕ ಬಾಹುಬಲಿ 2 ದಂಗಲ್‌ ದಾಖಲೆ ಮುರಿಯುವ ಜೊತೆಗೆ 3000 ಕೋಟಿ ರು. ತಲುಪಿದ ಮೊದಲ ಚಿತ್ರವಾಗಬಹುದೆಂಬ ನಿರೀಕ್ಷೆ ಇದೆ.

ಹೆಚ್ಚು ಸಂಪಾದನೆಯ ಟಾಪ್‌ 5 ಚಿತ್ರಗಳು

-ದಂಗಲ್‌: 2000 ಕೋಟಿ ರು.
-ಬಾಹುಬಲಿ 2: 1725 ಕೋಟಿ 
-ಪಿಕೆ: 792 ಕೋಟಿ ರು.
-ಬಾಹುಬಲಿ 1: 650 ಕೋಟಿ 
-ಭಜರಂಗಿ ಭಾಯಿಜಾನ್‌: 626 ಕೋಟಿ ರು.