ಅಮಿರ್ ಖಾನ್ ಅಭಿನಯದ 'ದಂಗಾಲ್' ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಾ ಇದೆ. ಮೂರನೇ ವಾರದ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.
ನವದೆಹಲಿ (ಜ.07): ಅಮಿರ್ ಖಾನ್ ಅಭಿನಯದ 'ದಂಗಾಲ್' ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಾ ಇದೆ. ಮೂರನೇ ವಾರದ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.
ಬಿಡುಗಡೆಯಾದ 2 ನೇ ಶುಕ್ರವಾರ ಸುಮಾರು 6.66 ಕೋಟಿ ರೂ. ಗಳಿಸಿದೆ. 15 ದಿನಗಳಲ್ಲಿ ಒಟ್ಟು 320.16 ಕೋಟಿಯನ್ನು ಗಳಿಸಿದೆ. ಅಮೀರ್ ಖಾನ್ ಅಭಿನಯದ ಇನ್ನೊಂದು ಚಿತ್ರ ಪಿಕೆ ಗಳಿಕೆಯನ್ನು ಹಿಂದಿಕ್ಕಿ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಬೇಕು ಅನ್ನೋದು ದಂಗಾಲ್ ತಂಡದ ಗುರಿಯಾಗಿದೆ.
ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರ 17 ದಿನಗಳಲ್ಲಿ 300 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು.
ದಂಗಾಲ್ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದು, ಡಿಸ್ನಿ ನಿರ್ಮಾಪಕರಾಗಿದ್ದಾರೆ.
