Asianet Suvarna News Asianet Suvarna News

ಡಾಲಿ ಧನಂಜಯ್ ನಟಿ ಜೊತೆ ಹಾಟ್ ರೊಮ್ಯಾನ್ಸ್ ವೈರಲ್

ಸೋಷಿಯಲ್ ಮೀಡಿಯಾಗಳಲ್ಲಿ ಈಗ ಡಾಲಿಯದ್ದೇ ಹವಾ. ಬಹು ಭಾಷೆಯಲ್ಲಿ ತೆರೆಗೆ ಬರುವುದಕ್ಕೆ ಸಿದ್ಧವಾಗಿ ರುವ ‘ಭೈರವಗೀತ’ ಚಿತ್ರದ ಹಾಡಿನ ಸನ್ನಿವೇಶಗಳನ್ನು ಒಳಗೊಂಡ ಸ್ಟಿಲ್ಗಳನ್ನು ಚಿತ್ರದ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಧನಂಜಯ್ ಹಾಗೂ ಇರಾ ಮೆಹರಾ ಕೆಮಿಸ್ಟ್ರಿ ತುಂಬಾ ಜೋರಾಗಿ ಇದೆ ಎನಿಸುತ್ತಿದೆ. ಚಿತ್ರದ ಈ ಸ್ಟಿಲ್ಗಳನ್ನು ನೋಡಿದಾಗ ‘ಭೈರವಗೀತ’ ಪಡ್ಡೆ ಹುಡುಗರ ಹಾಟ್ ಚಿತ್ರನಾ ಅನಿಸುವಂತಿದೆ. ಆದರೆ, ನಟ ಧನಂಜಯ್ ಅವರು ಈ ಬಗ್ಗೆ ಹೇಳುವುದೇನು? ಅವರ ಮಾತುಗಳಲ್ಲೇ ಕೇಳಿ.

Dali Dhananjay romance photo with bhairava geetha heroin
Author
Bengaluru, First Published Oct 16, 2018, 10:39 AM IST
  • Facebook
  • Twitter
  • Whatsapp

ಅದು ಹಾಡಿನ ಝಳಕ್
ಸದ್ಯ ಈಗ ಹೊರಗೆ ಬಂದಿರುವ ಹಾಟ್ ಸ್ಟಿಲ್‌ಗಳು ಒಂದು ಹಾಡಿಗೆ ಸಂಬಂಧಿಸಿದ್ದು. ಅದೇ ಕತೆಯ ಮುಖ್ಯಭಾಗವಲ್ಲ. ಅಥವಾ ಇಡೀ ಸಿನಿಮಾ ಹಾಗೆ ಬಂದಿಲ್ಲ. ಚಿತ್ರದ ನಾಯಕ ಭೈರವನ ಇಮೇಜ್‌ನಲ್ಲಿ ಮೂಡುವ ಒಂದು ಟೈಮ್ ಪಾಸ್ ಹಾಟ್ ಹಾಡು. ಅದರ ಸ್ಟಿಲ್‌ಗಳನ್ನು ವರ್ಮಾ ಅವರು ಟ್ವೀಟ್ ಮಾಡಿದ್ದಾರೆ. ಬಹುಶಃ ಇದು ಅವರ ಮಾರುಕಟ್ಟೆಯ ತಂತ್ರ ಇರಬಹುದು. ಅಥವಾ ರಾಮ್‌ಗೋಪಾಲ್ ವರ್ಮಾ ಅವರಿಗೆ ತುಂಬಾ ಇಷ್ಟವಾಗಿರುವಂತಹುದು ಆಗಿರಬಹುದು. ಆ ಕಾರಣಕ್ಕೆ ಹಾಡಿನ ಸ್ಟಿಲ್‌ಗಳನ್ನು ಸೋಷಿಯಲ್ ಮಾಡಿಯಾಗಳಲ್ಲಿ ಹಾಕಿದ್ದಾರೆ.

ಬಡವ ಮತ್ತು ಶ್ರೀಮಂತನ ವಡುವಿನ ಹೋರಾಟ
ಭೈರವಗೀತ ಚಿತ್ರದ ಕತೆ ಬೇರೆಯದ್ದೇ. ನಿರ್ದೇಶಕ 25 ವರ್ಷದ ವಯಸ್ಸಿನ ಸಿದ್ದಾರ್ಥ್ ಶಂಕರ್ ತುಂಬಾ ಪ್ರಬುದ್ಧವಾದ ಕತೆಯನ್ನು ಹೇಳಿದ್ದಾರೆ. ಒಂದೇ ಸಾಲಿನಲ್ಲಿ ಹೇಳಿದರೆ ಇಲ್ಲದವನು ಮತ್ತು ಇರುವವನ ನಡುವಿನ ಹೋರಾಟದ
ಕತೆ ಇಲ್ಲಿದೆ. ಅಂದರೆ ಬಡವ ಮತ್ತು ಶ್ರೀಮಂತನ ಕತೆ. ಇಲ್ಲಿ ಬಡವ ಏನಾಗಿರುತ್ತಾನೆ, ಶ್ರೀಮಂತ ಹೇಗಿರುತ್ತಾನೆ. ಇವರಿಬ್ಬರಿಗೂ ಯಾಕೆ ಮುಖಾಮುಖಿ ಆಗುತ್ತದೆಂಬುದನ್ನು ತುಂಬಾ ಆಸಕ್ತಿಕರವಾಗಿ ಹೇಳಿದ್ದಾರೆ ನಿರ್ದೇಶಕರು.
 

ಕೀಳಾಗಿ ನೋಡುವವರಿಗೆ ಎಚ್ಚರಿಕೆ
ಸಮಾಜದಲ್ಲಿ ಯಾರನ್ನೂ ಯಾರೂ ಸಹ ಕೀಳಾಗಿ ನೋಡಬಾರದು. ಹಾಗೆ ಕೀಳಾಗಿ ನೋಡಿ ಅವನ ಮೇಲೆ ದೌರ್ಜನ್ಯ ಎಸಗಿದರೆ ಏನಾಗುತ್ತದೆಂಬುದನ್ನು ತಣ್ಣನೆಯ ಕ್ರೌರ್ಯದ ಮೂಲಕ ತೋರಿಸಿದ್ದಾರೆ. ಕೀಳಾಗಿ ಕಾಣುವ ಮನಸುಗಳು ನಮ್ಮ ನಡುವೆ ಇದ್ದರೆ ಒಮ್ಮೆ ಭೈರವಗೀತ ಸಿನಿಮಾ ನೋಡಿದರೆ ಅವರ ಮನಸ್ಸು ಬದಲಾಗುತ್ತದೆ. ಬದಲಾಗದಿದ್ದರೆ ಏನಾಗುತ್ತದೆಂಬ ಎಚ್ಚರಿಕೆಯೂ ಸಿನಿಮಾದಲ್ಲಿದೆ. ಈ ಸಿನಿಮಾದ ಸ್ಟಿಲ್‌ಗಳನ್ನು ನೋಡುವಂತೆ ಇದು ಹಸಿಬಿಸಿ ಚಿತ್ರವಲ್ಲ. ಮಹತ್ವದ ಸಿನಿಮಾ.
 

ನವೆಂಬರ್ ಮೊದಲ ವಾರದಲ್ಲಿ ತೆರೆಗೆ
ಮುಂದಿನ ತಿಂಗಳು ಮೊದಲ ವಾರದಲ್ಲಿ ಭೈರವ ಗೀತ ತೆರೆಗೆ ಬರುವ ಸಾಧ್ಯಗಳಿವೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತೆರೆಗೆ ಬರುವುದು ಪಕ್ಕಾ ಆಗಿದೆ. ಹಿಂದಿ ಹಾಗೂ ಮಲಯಾಳಂನಲ್ಲಿ ಮಾತುಕತೆ
ಆಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಆಗಲಿದೆ. 

Dali Dhananjay romance photo with bhairava geetha heroin

 

Follow Us:
Download App:
  • android
  • ios