Asianet Suvarna News Asianet Suvarna News

ನೋಡುಗರ ಎದೆ ಝಲ್ ಎನ್ನುವಂತೆ ಮಾಡುತ್ತವೆ ಧನಂಜಯ್- ಇರಾ ಲಿಪ್‌ಲಾಕ್ !

ಡಾಲಿ ಧನಂಜಯ್ ಟಗರು ಚಿತ್ರದ ಬಳಿಕ ಇದೀಗ  ’ಭೈರವ ಗೀತ’ ಚಿತ್ರದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ನಾಯಕಿ ಇರಾ ಜೊತೆ ಇವರ ಲಿಪ್‌ಲಾಕ್ ಸಖತ್ ಹಾಟ್ ಆಗಿದ್ದು ಟ್ರೇಲರ್ ನೋಡಿದವರು ಹುಬ್ಬೇರಿಸುವಂತಿದೆ. ಈ ಬಗ್ಗೆ ಡಾಲಿ ಧನಂಜಯ್ ’ಕನ್ನಡ ಪ್ರಭ’ ಜೊತೆ ಮಾತಿಗೆ ಸಿಕ್ಕಾಗ ಹೇಳಿದ್ದೇನು? ಇಲ್ಲಿದೆ ನೋಡಿ. 

Dali Dhananjay and Ira Liplock seen make a sensation in social media
Author
Bengaluru, First Published Sep 3, 2018, 12:09 PM IST

ಬೆಂಗಳೂರು (ಸೆ. 03): ಡಾಲಿ ಧನಂಜಯ್ ಸಖತ್ ಸುದ್ದಿಯಲ್ಲಿದ್ದಾರೆ. ‘ಭೈರವ ಗೀತ ’ಚಿತ್ರದ ಟ್ರೇಲರ್ ನೋಡಿದವರು ಶಾಕ್ ಆಗಿದ್ದಾರೆ. ನಾಯಕಿ ಇರಾ ಹಾಗೂ ಧನಂಜಯ್ ಜೋಡಿಯ ಲಿಪ್‌ಲಾಕ್ ದೃಶ್ಯಗಳು ನೋಡುಗರ ಎದೆ ಝಲ್ ಎನ್ನುವಂತೆ ಮಾಡಿವೆ.

ಟಾಲಿವುಡ್ ಎಂಟ್ರಿ, ಚಿತ್ರದಲ್ಲಿನ ಲಿಪ್‌ಲಾಕ್ ಸೀನ್, ಹಾಗೆಯೇ ‘ಭೈರವ ಗೀತ’ದ ವಿಶೇಷತೆ ಕುರಿತು ಡಾಲಿ ಧನಂಜಯ್ ಜತೆ ಮಾತುಕತೆ.

ಟಾಲಿವುಡ್ ಎಂಟ್ರಿ ಜೋರಾಗಿರುವಂತೆ ಕಾಣುತ್ತಿದೆ...

ರಾಮ್ ಗೋಪಾಲ್ ವರ್ಮ ಅವರ ನಿರ್ಮಾಣ ಜತೆಗೆ ಇದು ನೈಜ ಘಟನೆಯ ಕತೆ. ಬರಹಗಾರ ರಾಮ್‌ವಂಶಿ ಬಳಿ ಕತೆ ಕೇಳಿದಾಗಲೇ ನಾನು ಥ್ರಿಲ್ ಆಗಿದ್ದೆ. ತೆರೆ ಮೇಲೂ ಅದನ್ನು ಅಷ್ಟೇ ರೋಚಕವಾಗಿ ಬಂದಿದೆ. ಈಗಷ್ಟೇ ಟ್ರೇಲರ್ ಬಂದಿದೆ. ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಕ್ಕೂ ಇಂಥದ್ದೇ ಪ್ರತಿಕ್ರಿಯೆ ಸಿಗಬಹುದು ಎನ್ನುವ ನಿರೀಕ್ಷೆ ನನಗೂ ಇದೆ. ಆಗಲೇ ಗೊತ್ತಾಗುತ್ತೆ ಟಾಲಿವುಡ್ ಎಂಟ್ರಿ ಹೇಗಿರುತ್ತೆ ಅಂತ.

ಟಾಲಿವುಡ್‌ಗೂ ಹೋಗಬಹುದು ಅಂತ ಅಂದ್ಕೊಂಡಿದ್ರಾ?

ಖಂಡಿತಾ ಇಲ್ಲ. ಇವೆಲ್ಲವೂ ಅದಾಗಿಯೇ ಒದಗಿ ಬಂದ ಅವಕಾಶ. ನಿರ್ದೇಶಕ ಗುರು ಪ್ರಸಾದ್ ಮೈಸೂರಿನಲ್ಲಿ ನೋಡಿದ ಒಂದು ನಾಟಕ ನನ್ನನ್ನು ಹೀರೋ ಆಗಿ ಬೆಳ್ಳಿತೆರೆಗೆ ಬರುವಂತೆ ಮಾಡಿತು. ಡಾಲಿ ಪಾತ್ರಕ್ಕೆ ಆತನೇ ಬೇಕು ಅಂತ ಸೂರಿ ಅವರು ಡಿಸೈಡ್ ಮಾಡಿದ್ದಕ್ಕೆ ‘ಟಗರು’ ಚಿತ್ರಕ್ಕೆ ಆಯ್ಕೆಯಾದೆ. ಅಲ್ಲಿಂದ ರಾಮ್ ಗೋಪಾಲ್ ವರ್ಮ ಬೆಂಗಳೂರಿಗೆ ಬಂದು ‘ಟಗರು’ ಸಿನಿಮಾ ನೋಡಿದರು. ‘ಭೈರವ ಗೀತ’ ಚಿತ್ರಕ್ಕೂ ಆಯ್ಕೆ ಆಗುವಂತಾಯಿತು.

ಆರ್‌ಜಿವಿ ಜತೆಗಿನ ಒಡನಾಟ, ಚಿತ್ರೀಕರಣದ ಅನುಭವ ಹೇಗಿತ್ತು?

‘ಭೈರವ ಗೀತ’ಗೆ ವರ್ಮ ನಿರ್ಮಾಪಕರು ಮಾತ್ರ. ಉಳಿದಂತೆ ಇಡೀ ಚಿತ್ರಕ್ಕೆ ಕೆಲಸ ಮಾಡಿದ್ದು ಒಂದು ಉತ್ಸಾಹಿ ಯುವಕರ ತಂಡ. ಪ್ರಿನ್ಸಿಪಾಲ್ ಇದ್ದಂತೆ ವರ್ಮ ಅವರು, ಇಡೀ ಕೆಲಸದ ಉಸ್ತುವಾರಿ ನೋಡಿಕೊಂಡರು. ಅವರ ಜತೆಗಿನ
ಒಡನಾಟದಲ್ಲಿ ಒಂದು ಕ್ಷಣವೂ ಅವರು ಮುಂಗೋಪಿ, ಸಿಡುಕ ಎಂದೆನಿಸಿಲ್ಲ.

ಅವರೊಬ್ಬ ಪಕ್ಕಾ ವೃತ್ತಿಪರ ಡೈರೆಕ್ಟರ್. ಹಾಗೆಯೇ, ಅತೀವ ಕಾಳಜಿಯ ನಿರ್ಮಾಪಕ ಕೂಡ. ಸಿನಿಮಾ ಅಂದ್ರೆ ಅವರಿಗೆ ಮಗುವೇ ಇದ್ದಂತೆ. ಅದೇ ಪ್ರೀತಿ ಮತ್ತು ಮುತುವರ್ಜಿಯಲ್ಲಿ ‘ಭೈರವ ಗೀತ’ ಮೂಡಿ ಬಂತು.

ನಾಯಕಿ ಇರಾ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಹೇಳೊದಾದ್ರೆ...

ಅವರಿಗೂ ಇದು ಮೊದಲ ಸಿನಿಮಾ. ನನ್ನ ಹಾಗೆಯೇ ಟಾಲಿವುಡ್‌ಗೆ ನ್ಯೂ ಎಂಟ್ರಿ. ಸೆಟ್‌ಗೆ ಹೋದಾಗಲೇ ನಮ್ಮಿಬ್ಬರ ಪರಿಚಯ. ಅದರಲ್ಲೂ ವರ್ಮ ಅವರೇ ಆಯ್ಕೆ ಮಾಡಿದ ಹುಡುಗಿ. ಚಿತ್ರದಲ್ಲಿ ಅವರು ಒಬ್ಬ ಭೂಮಾಲೀಕನ ಮಗಳು. ಸೆಟ್‌ನಲ್ಲಿದ್ದಾಗ ಪ್ರತಿ ಕ್ಷಣವೂ ಸಿನಿಮಾದ ಗುಂಗಿನಲ್ಲಿರುತ್ತಿದ್ದರು. ಕಾಂಬಿನೇಷನ್ ಚೆನ್ನಾಗಿತ್ತು. ಈ ಸಿನಿಮಾ ಬಂದ್ರೆ ಅವರು ಅಲ್ಲಿ ಬ್ಯುಸಿ ಆಗುವುದು ಗ್ಯಾರಂಟಿ.

ಟ್ರೇಲರ್ ಬಂದಿದ್ದೇ ತಡ ಈಗ ನಿಮ್ಮ ಬಗ್ಗೆಯೇ ಟಾಕ್...

ಲಿಪ್‌ಲಾಕ್ ಸಿನಿಮಾದ ಸಾಂದರ್ಭಿಕ ಸನ್ನಿವೇಶ. ಪ್ರೀತಿ, ಪ್ರೇಮದ ಕತೆಯೊಳಗೆ ಇದು ಮಾಮೂಲು. ಇನ್ನು ವಾಸ್ತವವೇ ವರ್ಮ ಅವರ ಸಿನಿಮಾದ ಶೈಲಿ. ಆ ಕಾರಣಕ್ಕಾಗಿ ನಿರ್ದೇಶಕರು ಆ ಸನ್ನಿವೇಶ ಬೇಕು ಅಂತ ತೆರೆಯಲ್ಲಿ ತಂದಿದ್ದಾರೆ. ಕತೆಯ ಸಾಂದರ್ಭಿಕ ನೋಟದಲ್ಲೇ ಅದನ್ನು ನೋಡಬೇಕು. ಶಾಲಾ ಮಕ್ಕಳ ಡಾನ್ಸ್‌ನಲ್ಲೂ ರೊಮಾನ್ಸ್ ಇರುತ್ತೆ. ಆದರೆ ಅದನ್ನು ನಾವು ಡಾನ್ಸ್ ರೂಪದಲ್ಲೇ ನೋಡಿ ಆನಂದಿಸುತ್ತೇವೆ. ಹಾಗೆಯೇ ಸಿನಿಮಾದೊಳಗಿನ ಸಾಂದರ್ಭಿಕ
ಸನ್ನಿವೇಶಗಳನ್ನು ಕತೆಗೆ ಪೂರಕವಾಗಿಯೇ ನೋಡಿದರೆ ಚೆಂದ.

Follow Us:
Download App:
  • android
  • ios