ಈ ಬಾರಿ ಸರಿಗಮಪ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಆಗಮನ

First Published 3, Apr 2018, 3:06 PM IST
D Veerendra Heggade to be the Special Guest on Sa Re Ga Ma Pa
Highlights

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಲ್ ಚಾಂಪ್ಸ್ ವೇದಿಕೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸುತ್ತಿದ್ದಾರೆ.

ಬೆಂಗಳೂರು : ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಲ್ ಚಾಂಪ್ಸ್ ವೇದಿಕೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸುತ್ತಿದ್ದಾರೆ. ಆ ವಿಶೇಷ ಅತಿಥಿ ಯಾರು ಗೊತ್ತಾ..? ಅವರೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು. 

ಕಳೆದ ವಾರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಸಂಗೀತ ಲೋಕದ ದಿಗ್ಗಜ ಎಸ್.ಪಿ ಬಾಲಸುಬ್ರಮಣ್ಯಂ ಅವರು ಆಗಮಿಸಿದ್ದರು. ಈ ಬಾರಿ ಧರ್ಮಾಧಿಕಾರಿಗಳು ಆಗಮಿಸುತ್ತಿದ್ದಾರೆ.

ಎಲ್ಲಾ ಸ್ಪರ್ಧಿಗಳೂ ಕೂಡ ಇವರ ಆಗಮನಕ್ಕಾಗಿ ಖಾತರಿಸಿ ಕಾಯುತ್ತಿದ್ದಾರೆ. ಈ ಬಾರಿ ವೀಕೆಂಡ್’ನಲ್ಲಿ ಕಾರ್ಯಕ್ರಮಕ್ಕೆ  ಬರುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗಲಿದೆ.

loader