ನಂಬರ್ ಪ್ಲೇಟ್'ನಲ್ಲಿರುವ MH ಮಹಾರಾಷ್ಟ್ರ ರಾಜ್ಯದ ನೊಂದಣಿ ಸಂಖ್ಯೆಯಾಗಿದೆ. ಅಂಬೇಡ್ಕರ್ ಹುಟ್ಟಿದ್ದು ಮಧ್ಯಪ್ರದೇಶದಲ್ಲಾದರೂ ಅವರ ತಂದೆ-ತಾಯಿಯವರು ಮಹಾರಾಷ್ಟ್ರದವರೇ. ಈ ಹಿನ್ನೆಲೆಯಲ್ಲಿ 'ಕಾಲ' ಸಿನಿಮಾದ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಚೆನ್ನೈ: ನಟ ರಜನೀಕಾಂತ್‌ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ, ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾದ ಅವರ ನೂತನ ಚಿತ್ರ ‘ಕಾಲ ಕರಿಕಾಲನ್‌'ನ ಪೋಸ್ಟರ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಹೆಸರು ಬಿಡುಗಡೆ ಮಾಡಿದ ದಿನವೇ, ಚಿತ್ರದ ನಿರ್ಮಾಪಕರಾಗಿರುವ ರಜನಿ ಅವರ ಅಳಿಯ ಧನುಷ್‌, ರಜನಿ ಜೀಪಿನ ಮೇಲೆ ಕುಳಿತಿರುವ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಈ ಜೀಪ್‌ನ ನಂಬರ್‌ಪ್ಲೇಟ್‌ನಲ್ಲಿರುವ ಸಂಖ್ಯೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೀಪ್‌ನ ನಂಬರ್‌ ಪ್ಲೇಟ್‌ನಲ್ಲಿ ‘MH -01 BR 1956' ಎಂಬ ನಂಬರ್‌ ನಮೂದಾಗಿದೆ.

ನಂಬರ್‌'ಪ್ಲೇಟ್‌'ನಲ್ಲಿ ಇರುವ ಬಿಆರ್‌ ಮತ್ತು 1956 ಎಂಬ ಸಂಖ್ಯೆ ಇದೀಗ ಚರ್ಚೆಗೆ ಕಾರಣವಾಗಿರುವುದು. ಬಿಆರ್‌ ಎಂಬುದು ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿನ ಸೂಚಕವಾಗಿರಬಹುದು. 1956ನೇ ಇಸವಿ, ಅಂಬೇಡ್ಕರ್‌ ಅವರು ಬೌದ್ಧಮತಕ್ಕೆ ಮತಾಂತರವಾದ ವರ್ಷ. ಹೀಗಾಗಿ ಈ ಚಿತ್ರವನ್ನು ರಜನಿ ಅವರು ತಮ್ಮ ರಾಜಕೀಯ ಪ್ರವೇಶಕ್ಕೆ ಸೂಕ್ತ ವೇದಿಕೆಯಾಗಿ ಬಳಸಿಕೊಳ್ಳಬಹುದು ಎಂಬ ಚರ್ಚೆಗಳು ಇದೀಗ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು, ನಂಬರ್ ಪ್ಲೇಟ್'ನಲ್ಲಿರುವ MH ಮಹಾರಾಷ್ಟ್ರ ರಾಜ್ಯದ ನೊಂದಣಿ ಸಂಖ್ಯೆಯಾಗಿದೆ. ಅಂಬೇಡ್ಕರ್ ಹುಟ್ಟಿದ್ದು ಮಧ್ಯಪ್ರದೇಶದಲ್ಲಾದರೂ ಅವರ ತಂದೆ-ತಾಯಿಯವರು ಮಹಾರಾಷ್ಟ್ರದವರೇ. ಈ ಹಿನ್ನೆಲೆಯಲ್ಲಿ 'ಕಾಲ' ಸಿನಿಮಾದ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

epaper.kannadaprabha.in