ಮಾಸ್ತಿಗುಡಿ ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಕೇಸ್ ದಾಖಲಾಗಿದ್ದು, ಸೆಕ್ಷನ್ 188, 304 ರಂತೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು(ನ.08): ಖಳನಟರಿಬ್ಬರ ದುರಂತ ಸಾವಿಗೆ ಕಾರಣವಾಗಿದ್ದ ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಚಿತ್ರತಂಡದ ತಯಾರಿ ನಡೆಸಿದ್ದಾರೆ.
ಮಾಸ್ತಿಗುಡಿ ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಕೇಸ್ ದಾಖಲಾಗಿದ್ದು, ಸೆಕ್ಷನ್ 188, 304 ರಂತೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಸೆಕ್ಷನ್ 188 ಅಂದರೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪವಾಗಿದ್ದು, BWSSB ಅನುಮತಿ ಪತ್ರದಲ್ಲಿ ನಮೂದಿಸಿದ್ದ ಷರತ್ತುಗಳು ಚಿತ್ರತಂಡ ಉಲ್ಲಂಘಿಸಿದೆ. ಸೆಕ್ಷನ್ 304 ಅಂದರೆ ಉದ್ದೇಶವಿಲ್ಲದೆ ಕೊಲೆಗೈದ ಪ್ರಕರಣವಾಗಿದ್ದು, ಸೆಕ್ಷನ್ 304ರ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಈ ಹಿನ್ನಲೆಯಲ್ಲಿ ಬಂಧನದ ಭೀತಿಯಲ್ಲಿರುವ ಚಿತ್ರ ತಂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದು, ಸತತ ವಕೀಲರ ಸಂಪರ್ಕದಲ್ಲಿರುವ ಮಾಸ್ತಿಗುಡಿ ಚಿತ್ರತಂಡ ಬಂಧನದಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.
ಸದ್ಯ ಸಾಹಸ ನಿರ್ದೇಶಕ ರವಿವರ್ಮರಿಂದ ವಕೀಲ ಜೊತೆ ಚರ್ಚೆ ನಡೆಸಿದ್ದು, ಸುವರ್ಣನ್ಯೂಸ್‌ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
