ಕ್ರೇಜಿಸ್ಟಾರ್ ರವಿಚಂದ್ರನ್ ಇವತ್ತಿನವರೆಗೂ ಯಾವ ಸೆಲ್ಫೀ ತೆಗೆದವರಲ್ಲ. ಯಾರು ಎಷ್ಟು ಕೇಳಿದರೂ ಸೆಲ್ಫೀ ತೆಗೆಯಲು ಮುಂದಾದವರಲ್ಲ. ಅಂತಹಾ ವ್ಯಕ್ತಿಯನ್ನು ಒಬ್ಬರು ಕರಗಿಸಿದ್ದಾರೆ. ಯಾರಪ್ಪಾ ಅಂತಾ ವ್ಯಕ್ತಿ? ಯಾರಿಗೆ ಕರಗಿದ್ದಾರೆ ರವಿಚಂದ್ರನ್? 

ಬೆಂಗಳೂರು (ಜೂ. 27): ರವಿಚಂದ್ರನ್ ಮೊದಲಿನಿಂದಲೂ ಅಷ್ಟೇ, ನೇರ ಮತ್ತು ನಿಷ್ಠುರ. ತಾನಾಯಿತು, ತನ್ನ ಸಿನಿಮಾ ಆಯಿತು ಎಂಬಂತೆ ಇರುವ, ಹಗಲು ರಾತ್ರಿ ಸಿನಿಮಾಗಾಗಿ ದುಡಿಯುವ ಜೀವ ಅವರದು. ಅವರು ಇವತ್ತಿನವರೆಗೂ ಯಾವ ಸೆಲ್ಫೀ ತೆಗೆದವರಲ್ಲ.

ಯಾರು ಎಷ್ಟು ಕೇಳಿದರೂ ಸೆಲ್ಫೀ ತೆಗೆಯಲು ಮುಂದಾದವರಲ್ಲ. ಅಂತಹಾ ವ್ಯಕ್ತಿ ಯನ್ನು ಒಬ್ಬರು ಕರಗಿಸಿದ್ದಾರೆ. ತಮ್ಮ ಪತ್ನಿ ಸೆಲ್ಫೀ ಕೇಳಿದ್ದಕ್ಕೆ ಇಲ್ಲವೆನ್ನಲಾಗದೆ ಒಂದು ಸೆಲ್ಫೀ ತೆಗೆದೇಬಿಟ್ಟಿದ್ದಾರೆ. ಈ ವಿಚಾರ ಹೇಳಿ ಸೆಲ್ಫೀ ಹಂಚಿ ಕೊಂಡಿದ್ದು ಮನೋರಂಜನ್ ರವಿಚಂದ್ರನ್. ಆ ಪ್ರೇಮಭರಿತ ಸೆಲ್ಫೀ ಇಲ್ಲಿದೆ.