ಈ ದಿನಾಂಕವನ್ನು ರಾಜೀಸಂಧಾನ ಅಥವಾ ವಿಚಾರಣೆಗೆಂದು ದಿನಾಂಕ‌ ನಿಗದಿಪಡಿಸಲಾಗಿದೆ. ದಂಪತಿಗಳು 2015ರ ಸೆಪ್ಟೆಂಬರ್​ನಲ್ಲಿ ಪರಸ್ಪರ ಸಮ್ಮತಿಯಿಂದ 13 ಬಿ ಅಡಿ ವಿಚ್ಛೇದನ ಕೋರಿದ್ದರು. ಅಂದಿನಿಂದಲೂ ವಿಚಾರಣೆಗೆ ದಂಪತಿ ಗೈರು ಹಾಜರಾಗಿದ್ದಾರೆ.

ಬೆಂಗಳೂರು(ಮಾ.09): ಚಿತ್ರನಟ ಸುದೀಪ್ - ಪ್ರಿಯಾ ದಂಪತಿ ವಿಚ್ಚೇದನ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ.ಇಂದು ನಗರದ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ದಂಪತಿ ಗೈರು ಹಾಜರಾಗಿದ್ದಾರೆ. ಸುದೀಪ್ ಅವರ​ ಪರವಾಗಿ ಸಹೋದರಿ ಸುಜಾತ ಹಾಜರಾಗಿದ್ದರು. ಪತ್ನಿ ಪ್ರಿಯಾ ಹಾಗೂ ಅವರ ವಕೀಲರು ಗೈರು ಹಾಜರಾಗಿದ್ದರು.

ದಂಪತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್' ರಾಜಿಸಂಧಾನವಾಗಿದ್ದರೆ ಮಾಹಿತಿ ತಿಳಿಸಿ, ವಿಚ್ಛೇದನದ ಅರ್ಜಿ ಹಿಂಪಡೆಯಿರಿ. ಇಲ್ಲವಾದರೆ ವಿಚ್ಛೇದನದ ಬಗ್ಗೆ ಕೋರ್ಟ್​ನಿಂದಲೇ ವಿಚಾರಣೆ ನಡೆಸಲಾಗುವುದು. ನಂತರ ನ್ಯಾಯಾಲಯವೇ ಈ ಬಗ್ಗೆ ತೀರ್ಮಾನಿಸಲಿದೆ. ಸ್ವತಃ ವಿಚಾರಣೆ ನಡೆಸಿ ತೀರ್ಮಾನಿಸಲು ಕೋರ್ಟ್​ಗೆ ಅಧಿಕಾರವಿದೆ' ಎಂದ ನ್ಯಾಯಾಲಯ ತಿಳಿಸಿತು.

ಸುದೀಪ್ ಪರ ವಕೀಲ ಭಾಸ್ಕರ್ ಬಾಬು' ಮತ್ತಷ್ಟು ಕಾಲಾವಕಾಶ ಕೋರಿದರು. ಕೊನೆಯ‌ ಅವಕಾಶವೆಂದು ಹೇಳಿದ ಕೋರ್ಟ್ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.

ಈ ದಿನಾಂಕವನ್ನು ರಾಜೀಸಂಧಾನ ಅಥವಾ ವಿಚಾರಣೆಗೆಂದು ದಿನಾಂಕ‌ ನಿಗದಿಪಡಿಸಲಾಗಿದೆ. ದಂಪತಿಗಳು 2015ರ ಸೆಪ್ಟೆಂಬರ್​ನಲ್ಲಿ ಪರಸ್ಪರ ಸಮ್ಮತಿಯಿಂದ 13 ಬಿ ಅಡಿ ವಿಚ್ಛೇದನ ಕೋರಿದ್ದರು. ಅಂದಿನಿಂದಲೂ ವಿಚಾರಣೆಗೆ ದಂಪತಿ ಗೈರು ಹಾಜರಾಗಿದ್ದಾರೆ.

ಇತ್ತೀಚಿಗೆ ಇಬ್ಬರು ದಂಪತಿಗಳು ಒಟ್ಟಿಗೆ ಕಾಣಿಸುಕೊಳ್ಳುತ್ತಿರುವ ಕಾರಣ ರಾಜಿಯಾಗುವ ಸೂಚನೆಯಾಗಿದೆ. ಇಬ್ಬರು ಬೇಗ ಒಂದಾಗಲಿ ಎಂಬುದು ಸ್ನೇಹಿತರು ಹಾಗೂ ಅಭಿಮಾನಿಗಳ ಆಸೆಯಾಗಿದೆ.