ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ಮೇಲೆ ವಕೀಲ ಸಂಘದವರು ದೂರು ಸಲ್ಲಿಸಿದ್ದಾರೆ. ಇದೇನಪ್ಪಾ ಇವರ ಚಿತ್ರಕ್ಕೆ ಏನ್ ತಕರಾರು ಅಂತಾನಾ? ಇಲ್ಲಿದೆ ನೋಡಿ.

ಚಿತ್ರ ವಿಮರ್ಶೆ: ಅನಂತು ವರ್ಸಸ್ ನುಸ್ರತ್

ವಿನಯ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರ ತಂಡವು ಹೈಕೋರ್ಟ್ ಆವರಣದಲ್ಲಿ ನಾಯಕ ನಟನ ಫೋಟೋ ಶೂಟ್ ಮಾಡಿದೆ. ಇದಕ್ಕೆ ವಕೀಲ ಸಂಘದವರ ಅಥವಾ ಹೈಕೋರ್ಟ್ ಜಡ್ಜ್ ಅನುಮತಿ ಪಡೆದಿಲ್ಲ ಎನ್ನಲಾಗುತ್ತಿದೆ.

ಈ ಕಾರಣಕ್ಕೆ ವಕೀಲರಾದ ಅಮೃತೇಶ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ಕೆಲದಿನಗಳ ಹಿಂದೆ ಅರ್ಜಿ ವಿಚಾರಣೆ ನಡೆದಿದ್ದು ಹೈಕೋರ್ಟ್ FIR ದಾಖಲಿಸುವಂತೆ ಹೇಳಿದೆ.