ಐಎಎಸ್.ಅಧಿಕಾರಿ ಶಾಲಿನಿ ರಜನೀಶ್ ಮೇಲೆ ಈಗ ಚಿತ್ರ ಬರ್ತಿದೆ. ಹೆಸರಾಂತ ನಿರ್ದೇಶಕ ನಿಖಿಲ್ ಮಂಜು ಸ್ವತ: ಶಾಲಿನಿ ಅವರು ಬರೆದ 'ಐಎಎಸ್ ದಂಪತಿಯ ಕನಸುಗಳು' ಎಂಬ ಪುಸ್ತಕವನ್ನು ಆಧರಿಸಿಯೇ ಕಮರ್ಷಿಲ್ ಚೌಕಟ್ಟಿನಲ್ಲಿ ಶಾಲಿನಿ ಐಎಎಸ್ ಅಂತ ಸಿನಿಮಾ ಮಾಡ್ತಿದ್ದಾರೆ.
ಬೆಂಗಳೂರು (ಜೂ.24): ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮೇಲೆ ಈಗ ಚಿತ್ರ ಬರ್ತಿದೆ. ಹೆಸರಾಂತ ನಿರ್ದೇಶಕ ನಿಖಿಲ್ ಮಂಜು ಸ್ವತ: ಶಾಲಿನಿ ಅವರು ಬರೆದ 'ಐಎಎಸ್ ದಂಪತಿಯ ಕನಸುಗಳು' ಎಂಬ ಪುಸ್ತಕವನ್ನು ಆಧರಿಸಿಯೇ ಕಮರ್ಷಿಲ್ ಚೌಕಟ್ಟಿನಲ್ಲಿ ಶಾಲಿನಿ ಐಎಎಸ್ ಅಂತ ಸಿನಿಮಾ ಮಾಡ್ತಿದ್ದಾರೆ.
ಇಂದು ಗಾಂಧಿ ಭವನದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸಿಎಂ ಸಿದ್ಧರಾಮಯ್ಯನವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ರೋಷನ್ ಬೇಗ್ ಆಕ್ಷನ್ ಕಟ್ ಹೇಳಿದರು. ಶಿವಮೂರ್ತಿ ಮುರಘ ಶರಣರು ಇದೇ ವೇದಿಕೆಯಲ್ಲಿಯೇ ಅಂಗಾಂಗ ದಾನದ ಮಹತ್ವವನ್ನೂ ಸಾರಿದರು. ಚಿತ್ರದಲ್ಲಿ ಶಾಲಿನಿ ಪಾತ್ರವನ್ನ ನಟಿ ಸೋನು ಗೌಡ ಮಾಡ್ತಿದ್ದಾರೆ. ರಜನೀಶ್ ಗೋಯಲ್ ಪಾತ್ರವನ್ನ ರೋಜರ್ ನಿರ್ವಹಿಸಲಿದ್ದಾರೆ. ಸುವರ್ಣ ನ್ಯೂಸ್ ಜೊತೆಗೆ ರೀಲ್ ಶಾಲಿನಿ ಸೋನು ಗೌಡ ಮತ್ತು ರಜನೀಶ್ ಪಾತ್ರಧಾರಿ ರೋಜರ್ ಮಾತನಾಡಿದ್ದಾರೆ. ಐಎಎಸ್ ಅಧಿಕಾರಿ ಶಾಲಿನಿ ಕೂಡ ಚಿತ್ರದ ಕುರಿತ ಹೇಳಿದ್ದಾರೆ.
