ಬಾಡಿಗೆ ಹಣ ಬಾಕಿ ಪ್ರಕರಣ : ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ
ವಾರಾಸ್ದಾರ ಧಾರಾವಾಹಿ ಪ್ರಕರಣದ ಬಾಕಿ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರಾವಾಹಿ ಚಿತ್ರೀಕರಣ ಮಾಡಿದ್ದ ಮನೆಯ ಯಜಮಾನಗೆ ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ ಹಾಕಲಾಗಿದೆ.
ಚಿಕ್ಕಮಗಳೂರು : ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ಬಾಡಿಗೆ ಹಣ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಮೇಲಿನ ಪ್ರಕರಣ ಹಿಂಪಡೆಯುವಂತೆ ಧಮ್ಕಿ ಹಾಕಲಾಗಿದೆ.
ಕಿಚ್ಚ ಸುದೀಪ್ ಮ್ಯಾನೇಜರ್ ನವೀನ್ ಎಂದು ಹೇಳಿಕೊಂಡು ಧಮ್ಕಿ ಹಾಕಲಾಗಿದೆ. ನವೀನ್ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದು, ದೀಪಕ್ ಮಯೂರ್ ಎಂಬುವರಿಗೆ ಧಮ್ಕಿ ಹಾಕಲಾಗಿದೆ.
ವಾರಸ್ದಾರ ಧಾರವಾಹಿ ಚಿತ್ರೀಕರಣದ ಬಾಡಿಗೆ ಹಣ ಬಾಕಿ ಸಂಬಂಧ ಸುದೀಪ್ ವಿರುದ್ಧ ಬಾಡಿಗೆ ಹಣ ನೀಡದ ಕುರಿತು ದೀಪಕ್ ಮಯೂರ್ ಕೇಸ್ ದಾಖಲು ಮಾಡಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ಧಾರಾವಾಹಿ ಚಿತ್ರೀಕರಣ ಮಾಡಲಾಗಿತ್ತು. ಈ ಧಾರಾವಾಹಿಯನ್ನು ಕಿಚ್ಚ ಸುದೀಪ್ ನಿರ್ಮಾಣ ಮಾಡುತ್ತಿದ್ದರು. ಈ ವೇಳೆ ದೀಪಕ್ ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಬಾಡಿಗೆ ಬಾಕಿಗಾಗಿ ದೀಪಕ್ ಪ್ರಕರಣ ದಾಖಲು ಮಾಡಿದ್ದರು.
ಈ ನಿಟ್ಟಿನಲ್ಲಿ ಪ್ರಕರಣ ವಾಪಸ್ ಪಡೆಯಲು ಧಮ್ಕಿ ಹಾಕಿದ್ದಾರೆ ಎಂದು ಮಲ್ಲಂದೂರು ಠಾಣೆಯಲ್ಲಿ ನವೀನ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.