ಮಯೂರಿ ಉಪಾಧ್ಯ, ಶ್ರುತಿ ಹರಿಹರನ್ ಜೊತೆ ಚಂದನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಗೆದ್ದಿದ್ದೇ ಗೆದ್ದಿದ್ದು ಚಂದನ್ ಶೆಟ್ಟಿ ಅಭಿಮಾನಿ ಬಳಗ ದೊಡ್ಡದಾಗಿದೆ. ಅದಕ್ಕೆ ತಕ್ಕಂತೆ ನಾನಾ ಕಡೆಯಿಂದ ನಾನಾ ಆಫರ್‌ಗಳನ್ನು ಪ್ರತಿಭಾವಂತ ಚಂದನ್ ಶೆಟ್ಟಿಯನ್ನು ಹುಡುಕಿಕೊಂಡು ಬರುತ್ತಿದೆ. ಅದರಲ್ಲಿ ಮೊದಲನೇ ಅವಕಾಶವನ್ನು ಸ್ವತಃ ಕಲರ್ಸ್ ಸೂಪರ್ ವಾಹಿನಿ ನೀಡಿದೆ. ಇದೇ ಡಿ.5ರಿಂದ ಆರಂಭವಾಗಲಿರುವ ಮಾಸ್ಟರ್ ಡಾನ್ಸರ್ ರಿಯಾಲಿಟಿ ಶೋನ ತೀರ್ಪುಗಾರರಾಗಿ ಚಂದನ್ ಶೆಟ್ಟಿ ಭಾಗವಹಿಸಲಿದ್ದಾರೆ.
ಈ ಹಿಂದೆ ಕಲರ್ಸ್ ಕನ್ನಡದಲ್ಲಿ ‘ಡಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋ ಪ್ರಸಾರವಾಗುತ್ತಿತ್ತು. ಅದೇ ಮಾದರಿಯಲ್ಲಿ ಮಾಸ್ಟರ್ ಡಾನ್ಸರ್ ಕಾರ್ಯಕ್ರಮ ಪ್ರಸಾರವಾಗಲಿದೆ. ಮಯೂರಿ ಉಪಾಧ್ಯ, ಶ್ರುತಿ ಹರಿಹರನ್ ಜೊತೆ ಚಂದನ್ ಶೆಟ್ಟಿ ತೀರ್ಪುಗಾರರಾಗಿ
ಭಾಗವಹಿಸುತ್ತಿದ್ದಾರೆ. ಅಂದಹಾಗೆ ಈ ಡಾನ್ಸ್ ಕಾರ್ಯಕ್ರಮ ಡಿ.5ರಿಂದ ಸೋಮವಾರ ಮತ್ತು ಮಂಗಳವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Last Updated 11, Apr 2018, 12:44 PM IST