ಚಂದನ್ ಶೆಟ್ಟಿ ಚಡ್ಡಿ ಹಾಡಿಗೆ ಮಿಲಿಯನ್ ಹಿಟ್ಸ್

Chandan Shetty new song Chaddi Olage cross million hits
Highlights

ರ‍್ಯಾಪರ್ ಚಂದನ್ ಶೆಟ್ಟಿ ಹಾಡುಗಳು ನೆಟ್ ಜಗತ್ತಿನಲ್ಲಿ ಸಾಕಷ್ಟು ಸೌಂಡು ಮಾಡುತ್ತಲೇ ಇವೆ. ಶಿವತೇಜಸ್ ನಿರ್ದೇಶಿಸಿ, ಡಾ ಕೆ ರಾಜು ನಿರ್ಮಾಣದ 'ಲೌಡ್‌ಸ್ಪೀಕರ್' ಚಿತ್ರದಲ್ಲಿ 'ಚಡ್ಡಿ' ಹೆಸರಿನಲ್ಲೊಂದು ಹಾಡನ್ನು ಕಂಪೋಸ್ ಮಾಡಲಾಗಿದ್ದು, ಈ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ. 

ಚಿತ್ರದ ಹೆಸರಿಗೆ ತಕ್ಕಂತೆ  ಹಾಡು ಸೌಂಡ್ ಮಾಡುತ್ತಿದ್ದು, ಈ ಹಾಡಿಗೆ ಒಂದು ಮಿಲಿಯನ್ ಹಿಟ್ಸ್ ಸಿಕ್ಕಿದೆ. ಈಗ ಇದೇ ಹಾಡನ್ನು ರಿಮಿಕ್ಸ್ ವರ್ಷನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

 

loader