ಬಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಒಬ್ಬರನ್ನು ಬೇಬಿ ಎಂದು ಕರೆದಿದ್ದಾರೆ! ಹೌದು ಸಲ್ಮಾನ್ ಖಾನ್ ಹೊಸ ಗೆಳತಿಗೆ ಕೊಡುಗೆ ನೀಡಿದ್ರಾ? ಇಲ್ಲಿದೆ ಉತ್ತರ..
ದಬಂಗ್ ಟೂರ್ ನಲ್ಲಿ ಸಲ್ಮಾನ್-ಕತ್ರೀನಾ ಕೈಫ್ ದೇಶ-ದೇಶ ವಿದೇಶಗಳನ್ನು ಸುತ್ತುತ್ತಿರುವುದು ನಿಮಗೆಲ್ಲಾ ಗೊತ್ತು. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಕತ್ರಿನಾ ಅವರನ್ನು ‘ಬೇಬಿ’ ಎಂದು ಕರೆದಿದ್ದಾರೆ.
ಜುಲೈ 15ಕ್ಕೆ ಕತ್ರೀನಾ ಜನ್ಮದಿನವಿದೆ ಎಂದು ವರದಿಗಾರರೊಬ್ಬರು ವಿಷಯ ಪ್ರಸ್ತಾಪ ಮಾಡಿದಾಗ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ ‘My baby's birthday is on July 16’ ಎಂದರು. ಅಂದರೆ ನಿಮಗೆ ಗೊಂದಲವಾಗಿರಬೇಕು ಆಕೆಯ ಬರ್ತ್ ಡೇ ಇರುವುದು ಜುಲೈ 16 ಕ್ಕೆ ಎಂದು ಸರಿ ಮಾಡಿದರು.
ಬಾಲಿವುಡ್ ನಟ ರಣಬೀರ್ ಕಪೂರ್ ರೊಂದಿಗೆ ಸುತ್ತಾಟ ಮಾಡಿದ್ದ ಕತ್ರೀನಾ ಟೈಗರ್ ಜಿಂದಾ ಹೈ ಚಿತ್ರದ ನಂತರ ಸಲ್ಮಾನ್ ಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೇ ಜುಲೈ 16ಕ್ಕೆ ಕತ್ರೀನಾಗೆ 34 ವರ್ಷ ತುಂಬಲಿದೆ.
