ಮುಂಬೈ[ಅ.5] ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ಬಾಕ್ಸಾಫೀಸ್ ಸುಲ್ತಾನ ಎಂದು ಕರೆಸಿಕೊಂಡಿರುವ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ,

ಸಲ್ಮಾನ್ ಖಾನ್ ಪಾಕಿಸ್ತಾನದ ಗಾಯಕರಿಗೆ ಪ್ರಮೋಶನ್ ನೀಡುತ್ತಿದ್ದಾರೆ  ಎಂದು ಆರೋಪಿಸಿದ್ದಾರೆ. ಇಂಥ ನಡವಳಿಕೆ ಬಾಲಿವುಡ್ ಗೆ ಮಾರಕ ಎಂದು ಹೇಳಿದ್ದಾರೆ. 

ಮೈ ಹೂ ನಾ ಚಿತ್ರದ ನಂತರ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಯಾಕೆ ನಿಲ್ಲಿಸಿದೆ ಎಂಬುದನ್ನು ಹೇಳಿದ್ದಾರೆ.  ನಾನು ಯಾವುದೇ ಖಾನ್ ಗಳ ಜತೆ ಮುಂದೆ ಹಾಡುವುದಿಲ್ಲ. ‘ಮೈ ಹೂ ನಾ’ ಸಮಯದಲ್ಲಿ ಎಲ್ಲರಿಗೂ ಸಲಾಂ ಹೊಡೆದು ಬದುಕಬೇಕಾದ ಸ್ಥಿತಿ ಇತ್ತು ಎಂದು ಆರೋಪಿಸಿದ್ದಾರೆ.