ಬಾಲಿವುಡ್ ಬಾರ್ಬಿ ಡಾಲ್ ದೀಪಿಕಾ ಪಡುಕೋಣೆ ಬಹುನಿರೀಕ್ಷಿತ ಚಿತ್ರಗಳ ಸಾಲಲ್ಲಿ ’ಚಪಾಕ್’ ಸಿನಿಮಾವೂ ಸೇರಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಪೋಸ್ಟರ್ ಮೂಲಕವೇ ಕೋಟ್ಯಂತರ ಜನರ ಗಮನ ಸೆಳೆದಿದೆ.

15 ವರ್ಷವಿದ್ದಾಗ ಲಕ್ಷ್ಮೀ ಎಂಬ ಹುಡುಗಿಯ ಮೇಲೆ ಪರಿಚಯಸ್ತ ಹುಡುಗನೊಬ್ಬ ಆ್ಯಸಿಡ್ ದಾಳಿ ಮಾಡುತ್ತಾನೆ. ಇದರಿಂದ ದೊಡ್ಡ ಮಟ್ಟದಲ್ಲಿ ನೋವು ಅನುಭವಿಸಿದ ಲಕ್ಷ್ಮೀ ತನ್ನಂತೆ ಆ್ಯಸಿಡ್ ದಾಳಿಗೆ ಒಳಗಾದವರನ್ನು ರಕ್ಷಣೆ ಮಾಡಲು ಶುರು ಮಾಡಿದರು. ಈ ಕಥೆಯನ್ನು ಇಟ್ಟುಕೊಂಡು ಚಪಕ್ ಮೂವಿ ಮೂಡಿ ಬರುತ್ತಿದೆ. ದೀಪಿಕಾ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದು, ಮೊದಲ ಲುಕ್ ರಿಲೀಸ್ ಆಗಿದೆ.

View post on Instagram

ಚಿತ್ರದ ಪೋಸ್ಟರ್ ನೋಡಿದರೇ ಭರವಸೆ ಮೂಡಿಸುತ್ತದೆ. ಇನ್ನು ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್‌ಗೆ ಇದೊಂದು ದೊಡ್ಡ ಸವಾಲಾಗಿದ್ದು ಸಿನಿಮಾವನ್ನು ಜನವರಿ 2020 ರಲ್ಲಿ ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.