ಬಾಲಿವುಡ್ ನಟಿ ಅಲಿಯಾ ಭಟ್ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಪೇಯಿಂಟಿಂಗ್ ಎಕ್ಸಿಬಿಷನ್ ಆಯೋಜಿಸಿದ್ದು ಅದಕ್ಕಾಗಿ ಫಂಡ್ ಸಂಗ್ರಹ ಮಾಡುವುದಕ್ಕೆ ಬೆಂಬಲ ನೀಡಿದ್ದಾರೆ.  

"ಯುವಕರಿಗಿಂತ ಮಕ್ಕಳೇ ಹೆಚ್ಚು ಸಕಾರಾತ್ಮಕವಾಗಿರುತ್ತಾರೆ. ಅವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳೇ ಇರುವುದಿಲ್ಲ. ಹಾಗಾಗಿ ಅವರು ಬೇಗ ಗುಣಮುಖರಾಗುತ್ತಾರೆ" ಎಂದು ಅಲಿಯಾ ಭಟ್ ಹೇಳಿದ್ದಾರೆ. ಮುಂಬೈನ ಬಾಯಿ ಜರ್ಬಾಯಿ ವಾಡಿಯಾ ಆಸ್ಪತ್ರೆಯಲ್ಲಿ ಎಕ್ಸಿಬಿಶನ್ ಅನಾವರಣಗೊಳಿಸಿ ಮಾತನಾಡಿದರು. 

 

 
 
 
 
 
 
 
 
 
 
 
 
 

#aliabhatt today at wadia hospital

A post shared by Viral Bhayani (@viralbhayani) on Oct 2, 2019 at 7:32am PDT

ನಾನು ಜರ್ಬಾಯಿ ವಾಡಿಯಾ ಆಸ್ಪತ್ರೆ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಭೇಟಿ ನೀಡಿದೆ. ಈ ಮಕ್ಕಳಿಗಾಗಿ 'Art for the Heart' ಎನ್ನುವ ಪೇಯಿಂಟಿಂಗ್ ಎಕ್ಸಿಬಿಶನ್ ನನ್ನುಆಯೋಜಿಸಲಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ಶಿಶುಗಳ ಹಾರ್ಟ್ ಸರ್ಜರಿಗಾಗಿ ಬಳಸಿಕೊಳ್ಳಲಾಗುತ್ತಿದೆ ’ ಎಂದು ಅಲಿಯಾ ಭಟ್ ಹೇಳಿದ್ದಾರೆ. 

ಇತ್ತೀಚಿಗೆ IIFA 2019 ಅವಾರ್ಡ್ ನಲ್ಲಿ ಅಲಿಯಾ ಭಟ್ ಗೆ ರಾಜಿ ಸಿನಿಮಾಗಾಗಿ Best Actress ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್ ಪೀಪಲ್ ಚಾಯ್ಸ್ ಅವಾರ್ಡ್ 2019 ಗೆ ನಾಮಿನೇಟ್ ಕೂಡಾ ಆಗಿದ್ದಾರೆ. 

ಅಲಿಯಾ ಭಟ್ ಸದ್ಯ ರಣಬೀರ್ ಕಪೂರ್ ಜೊತೆ ಬ್ರಹ್ಮಸೂತ್ರ ದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಬಚ್ಚನ್, ಅಕ್ಕಿನೇನಿ ನಾಗಾರ್ಜುನ್ ಕೂಡಾ ನಟಿಸಿದ್ದಾರೆ.