ನಟಿ ಸುಶ್ಮಿತಾ ಸೇನ್ ಯಾವಾಗ ತೆರೆ ಮೇಲೆ ಬರುತ್ತಾರೆ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್! ಸದ್ಯದಲ್ಲೇ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ ಸುಶ್ಮಿತಾ ಸೇನ್. 

ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಶೇರ್ ಮಾಡುತ್ತಾ, ಮೇಕಪ್, ಹೇರ್, ಲೈಟ್ಸ್... ನಾನು ಹಿಂತಿರುಗಲು ಪ್ರಿಪೇರ್ ಆಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

 

ಸುಶ್ಮಿತಾ ಸೇನ್ ಕೆಲ ವರ್ಷಗಳ ಕಾಲ ಚಿತ್ರಂರಂಗದಿಂದ ದೂರ ಉಳಿದಿದ್ದರು. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಉತ್ತರಿಸುತ್ತಾ, ‘ ನನ್ನ ಮಕ್ಕಳಾದ ಅಲಿಶಾ ಹಾಗೀ ಚೆರಿಶ್ ಗೆ ಸಮಯ ಕೊಡಬೇಕಾಗಿತ್ತು. ಅವರ ಬಗ್ಗೆ ಗಮನ ಹರಿಸಬೇಕಾಗಿತ್ತು. ನಾನು ನನ್ನ ಬಾಲ್ಯದಲ್ಲಿ ಕಳೆದುಕೊಂಡ ನೆನಪುಗಳನ್ನು ನನ್ನ ಮಕ್ಕಳು ಕಳೆದುಕೊಳ್ಳಬಾರದು. ಹಾಗಾಗಿ ಸಿನಿಮಾದಿಂದ ದೂರ ಉಳಿದೆ. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಈಗ ಮತ್ತೆ ಕಮ್ ಬ್ಯಾಕ್ ಆಗುವ ಸಮಯ‘ ಎಂದಿದ್ದಾರೆ.