ಭೂಮಿ ತೂಕದ ಹುಡುಗಿ ಈ ಮಲ್ಲಿಗೆ ಬಳ್ಳಿ

Bollywood Actress Sandhya Verma Diet Tips
Highlights

ಧಮ್ ಲಗಾಕೆ ಹೈಸ’ ಸಿನಿಮಾದ ಸಂಧ್ಯಾ ವರ್ಮಾಳನ್ನು ಕಣ್ಮುಂದೆ ತಂದುಕೊಳ್ಳಿ. ಉಳಿದ ನಟಿಯರ‌್ಯಾರೂ ಒಪ್ಪದ ಪಾತ್ರಕ್ಕೆ ಅನಿವಾರ್ಯವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಈ ಹುಡುಗಿ ‘ಹೂಂ’ ಅಂದ್ಲು. ದಪ್ಪ ಹೆಚ್ಚಿಸಿಕೊಂಡಳು. ಸಿನಿಮಾ ರಿಲೀಸ್ ಆಗಿ ಸ್ವಲ್ಪ ದಿನಕ್ಕೆ ಆಕೆ ತೂಕ ಇಳಿಸಿ ಹಿಂದಿನ ಭೂಮಿ ಪೆಡ್ನೇಕರ್ ಆಗಿದ್ಲು.  

‘ಧಮ್ ಲಗಾಕೆ ಹೈಸ’ ಸಿನಿಮಾದ ಸಂಧ್ಯಾ ವರ್ಮಾಳನ್ನು ಕಣ್ಮುಂದೆ ತಂದುಕೊಳ್ಳಿ. ಉಳಿದ ನಟಿಯರ‌್ಯಾರೂ ಒಪ್ಪದ ಪಾತ್ರಕ್ಕೆ ಅನಿವಾರ್ಯವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಈ ಹುಡುಗಿ ‘ಹೂಂ’ ಅಂದ್ಲು. ದಪ್ಪ ಹೆಚ್ಚಿಸಿಕೊಂಡಳು. ಸಿನಿಮಾ ರಿಲೀಸ್ ಆಗಿ ಸ್ವಲ್ಪ ದಿನಕ್ಕೆ ಆಕೆ ತೂಕ ಇಳಿಸಿ ಹಿಂದಿನ ಭೂಮಿ ಪೆಡ್ನೇಕರ್ ಆಗಿದ್ಲು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂದ ‘ಶುಭ  ಮಂಗಲ್ ಸಾವಧಾನ್’ ಸಿನಿಮಾ ಹೊತ್ತಿಗೆ ಕೇವಲ ೪ ತಿಂಗಳಲ್ಲಿ 25 ಕೆಜಿ ತೂಕ ಕಳೆದುಕೊಂಡು ಮತ್ತಷ್ಟು ಸ್ಲಿಮ್ ಆ್ಯಂಡ್ ಫಿಟ್ ಆದಳು. ಈಗ ಸ್ಲಿಮ್ ಆ್ಯಂಡ್ ಫಿಟ್ ಬ್ಯೂಟಿ ಆಗಿದ್ದಾಳೆ.

ವರ್ಕೌಟ್ ಹೀಗಿರುತ್ತೆ!

ನಿತ್ಯ ಕಾರ್ಡಿಯೋ ಎಕ್ಸರ್‌ಸೈಸ್ ಮಾಡ್ತಾರೆ. ಪಿಲಾಟೆಸ್ ಮಿಸ್ ಮಾಡಲ್ಲ. 

ತೂಕ ಇಳಿಸಲು ಸ್ಪೆಷಲ್ ಟ್ರೈನಿಂಗ್ ತಗೊಳ್ತಾರೆ.

ಮೆಶಿನ್ ಬಳಸದೇ ಕುರ್ಚಿ, ಗೋಡೆ ಬಳಸಿ ಒಂದಿಷ್ಟು ವ್ಯಾಯಾಮ ಮಾಡುತ್ತಾರೆ.

ಬೆಳ್ಳಂಬೆಳಗ್ಗೆದ್ದು ಇಷ್ಟದ ಹಾಡು ಹಾಕ್ಕೊಂಡು ಮನಸೋ ಇಚ್ಛೆ ಡಾನ್ಸ್ ಮಾಡೋದು ವರ್ಕೌಟ್‌ನ ಒಂದು ಭಾಗ. ಊಟಕ್ಕಿಂತ ಅರ್ಧಗಂಟೆ ಮೊದಲು ೨೦ ಸಲ ಜಂಪ್ ಮಾಡೋ ಕ್ರೇಜಿ ಹುಡ್ಗಿ ಈಕೆ

ಡಯೆಟ್

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು. ಒಂದು ಗಂಟೆ ನಂತರ ಕೊಬ್ಬು ರಹಿತ ಹಾಲು ಮತ್ತು ಓಟ್ಸ್.

ಜಿಮ್‌ನಿಂದ ಬಂದ ಬಳಿಕ ಎಗ್‌ವೈಟ್ ಜೊತೆಗೆ ಗೋಧಿ ಬ್ರೆಡ್ ಮತ್ತು ಹಣ್ಣು.

ಮಧ್ಯಾಹ್ನ ರೋಟಿ ದಾಲ್, ತರಕಾರಿ, ಒಂದು ಕಪ್ ಮನೆಯಲ್ಲಿ ತಯಾರಿಸಿ ಮೊಸರು ಅಥವಾ ಮಜ್ಜಿಗೆ. ಕೆಲವೊಮ್ಮೆ ಗ್ರಿಲ್ಡ್ ಚಿಕನ್ ತಿನ್ನೋದು ಇದೆ. 

ಸಂಜೆ ಹೊತ್ತು ಹಣ್ಣು ತರಕಾರಿ. ಪಪ್ಪಾಯಿ ಹಣ್ಣು ಪ್ರತಿದಿನ ತಿನ್ನುತ್ತಾರೆ.

ರಾತ್ರಿ ಚಿಕ್ಕ ಕಪ್ ಕೆಂಪಕ್ಕಿ ಅನ್ನ, ಸಲಾಡ್, ಗ್ರಿಲ್ಡ್ ಚಿಕನ್ ಅಥವಾ ಮೀನು.   

loader